'ಪೊಗರು' ಮುಹೂರ್ತಕ್ಕೆ ಡೇಟ್ ಫಿಕ್ಸ್
ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರ ಸೆಟ್ಟೇರಲು ಸಜ್ಜಾಗಿದೆ. ನಂದಕಿಶೋರ್ ನಿರ್ದೇಶನದಲ್ಲಿ ಪ್ರಾರಂಭವಾಗುತ್ತಿರುವ 'ಪೊಗರು' ಸಿನಿಮಾ ಪಕ್ಕಾ ಕಮರ್ಷಿಯಲ್ ಸ್ವಮೇಕ್ ಚಿತ್ರ.
ಫಿಟ್ ಅಂಡ್ ಫೈನ್ ಆಗಿದ್ದ ಧ್ರುವ ಸರ್ಜಾ 'ಪೊಗರು' ಸಿನಿಮಾಗಾಗಿ 30 ಕೆಜಿ ತೂಕ ಇಳಿಸಿಕೊಳ್ಳಲು ನಿರ್ಧರಿಸಿದ್ದರು. ಅದರಂತೆ ಈಗಾಗಲೇ ಸಾಕಷ್ಟು ತೂಕ ಇಳಿಸಿರುವ ಆಕ್ಷನ್ ಪ್ರಿನ್ಸ್ 'ಪೊಗರು' ಚಿತ್ರಕ್ಕಾಗಿ ಸಖತ್ತಾಗಿಯೇ ತಯಾರಿ ಮಾಡಿಕೊಂಡಿದ್ದಾರೆ. 'ಭರ್ಜರಿ' ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಧ್ರುವ ಬಿಗ್ ಸ್ಕ್ರೀನ್ ಮೇಲೆ ತಮ್ಮ ಅಭಿನಯದ ಮೂಲಕ 'ಪೊಗರು' ತೋರಲಿದ್ದಾರೆ.ನಂದಕಿಶೋರ್ ನಿರ್ದೇಶನದಲ್ಲಿ ಧ್ರುವ ಅಭಿನಯದ 'ಹಯಗ್ರೀವಾ' ಸಿನಿಮಾದ ಟೈಟಲ್ ಬದಲಾಗಿಯೇ 'ಪೊಗರು' ಆಗಿದೆ. ಸೋ, ಈ ಹಿಂದೆ ಸೆಟ್ಟೇರಿದ್ದ ಈ ಚಿತ್ರಕ್ಕೆ ಮತ್ತೊಮ್ಮೆ ಮಹೂರ್ತ ಏಕೆ? ಅಂತೆಲ್ಲಾ ಯೋಚಿಸಬೇಡಿ. ಯಾಕಂದ್ರೆ 'ಹಯಗ್ರೀವಾ' ಚಿತ್ರಕ್ಕೂ 'ಪೊಗರು' ಸಿನಿಮಾಗೂ ಯಾವುದೇ ಸಂಬಂಧವಿಲ್ಲ.
ಹೊಸ ಕತೆಯೊಂದಿಗೆ ಕ್ಯಾಚಿ ಟೈಟಲ್ ಜೊತೆಯಲ್ಲಿ ನಂದಕಿಶೋರ್ ಫ್ರೆಶ್ ಕಥೆಯನ್ನು ಪ್ರೇಕ್ಷಕರ ಮುಂದಿಡಲು ಬರುತ್ತಿದ್ದಾರೆ. ನಂದಕಿಶೋರ್ ನಿರ್ದೇಶನ ಮಾಡುತ್ತಿರುವ 'ಪೊಗರು' ಪಕ್ಕಾ ಕಮರ್ಷಿಯಲ್ ಸ್ವಮೇಕ್ ಚಿತ್ರ.ನಾಳೆ (ಡಿಸೆಂಬರ್ 14) ಬೆಳ್ಳಂಬೆಳಗ್ಗೆ ರಾಜಾಜಿನಗರದ ರಸ್ತೆಯಲ್ಲಿರುವ ಗಣಪತಿ ದೇವಸ್ಥಾನದಲ್ಲಿ 'ಪೊಗರು' ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ. ನಂದಕಿಶೋರ್ ನಿರ್ದೇಶನದ ಎಲ್ಲಾ ಚಿತ್ರಗಳ ಪೂಜೆ ಇದೇ ದೇವಸ್ಥಾನದಲ್ಲಿ ನಡೆದಿದ್ದು, 'ಪೊಗರು' ಚಿತ್ರಕ್ಕೂ ಇದೇ ದೇವಸ್ಥಾನದಲ್ಲಿ ಚಾಲನೆ ಸಿಗಲಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರಕ್ಕೆ ಕ್ಲಾಪ್ ಮಾಡುವ ಸಾಧ್ಯತೆಗಳಿವೆ.'ಪೊಗರು' ಸಿನಿಮಾದಲ್ಲಿ ಧ್ರುವ ಸರ್ಜಾ ಶಾಲೆಯ ಹುಡುಗನಾಗಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಕಾರಣಕ್ಕಾಗಿ 30 ಕೆ ಜಿ ತೂಕ ಇಳಿಸಿಕೊಳ್ಳಲು ನಿರ್ದೇಶಕರು ಸೂಚನೆ ನೀಡಿದ್ದರು. ಈಗಾಗಲೇ ಸಾಕಷ್ಟು ತೂಕ ಇಳಿಸಿರುವ ಧ್ರುವ ಲುಕ್ ನಲ್ಲಿ ಬದಲಾವಣೆ ಕಾಣುತ್ತಿದೆ.
Comments