ರೆಬೆಲ್ ಸ್ಟಾರ್ ಅಂಬಿ ಸುಪುತ್ರನಿಗೆ ಭಾರೀ ಡಿಮ್ಯಾಂಡ್

ತಿಂಗಳಿಗೆ ಎರಡೆರಡು ಅಂಬರೀಶ್ ಸಿನಿಮಾಗಳು ರಿಲೀಸ್ ಅಗುತ್ತಿದ್ದವು. ಆ ಎರಡೂ ಚಿತ್ರಗಳು ಸೂಪರ್ ಹಿಟ್ ಆಗುತ್ತಿದ್ದವು. ಅದು ರೆಬೆಲ್ ಸ್ಟಾರ್ ಗಿದ್ದ ಅಭಿಮಾನಿಗಳ ಪ್ರೀತಿ. ಈಗ ಅದೇ ಪ್ರೀತಿಯನ್ನು ಪಡೆಯಲು ರೆಡಿಯಾಗುತ್ತಿದ್ದಾರೆ ಅಂಬಿಯ ಏಕೈಕ ಮಗ ಅಭಿಷೇಕ್.
ಹೌದು. ಇನ್ನು ಕೆಲವು ವರ್ಷಗಳಲ್ಲಿ ಅಭಿಷೇಕ್ ಹೀರೋ ಆಗಿ ಎಂಟ್ರಿ ಕೊಡುವುದು ಖಚಿತವಾಗಿದೆ. ದೊಡ್ಡ ದೊಡ್ಡ ನಿರ್ಮಾಪಕರು ಅಂಬಿ ಮನೆ ಮುಂದೆ ಜೂನಿಯರ್ ರೆಬೆಲ್ ಸ್ಟಾರ್ ಕಾಲ್ ಶಿಟ್ ಗಾಗಿ ಕಾದು ಕುಳಿತ್ತಿದ್ದಾರೆ.ಕಥೆ-ಚಿತ್ರಕಥೆ ರೆಡಿ ಮಾಡಿಕೊಳ್ಳದೆಯೇ, ನಿರ್ದೇಶಕ ಯಾರೆಂಬುದನ್ನು ಕನ್ಫರ್ಮ್ ಮಾಡಿಕೊಳ್ಳದೆಯೇ ಪ್ರೋಡ್ಯೂಸರ್ ಗಳು ಅಂಬಿ ಪುತ್ರ ಅಭಿಷೇಕ್ ಗಾಗಿ ಬಲೆ ಬೀಸಿದ್ದಾರೆ. ಸರ್ ನಿಮ್ಮ ಮಗನ್ನ ನಮ್ಮ ಬ್ಯಾನರ್‍ನಲ್ಲಿ ಇಂಟ್ರೊಡ್ಯೂಸ್ ಮಾಡಿ. ಗ್ರ್ಯಾಂಡ್ ಆಗಿ ಲಾಂಚ್ ಮಾಡ್ತೇವೆ ಎಂದು ಬೇಡಿಕೆ ಇಡುತ್ತಿದ್ದಾರಂತೆ.
ಗಾಂಧಿನಗರ ಆಫ್ ದಿ ರೆರ್ಕಾಡ್ ಸಮಾಚಾರವೇನಂದ್ರೆ ಖ್ಯಾತ ನಿರ್ಮಾಪಕ ಸಂದೇಶ್ ನಾಗರಾಜ್ ನಿರ್ಮಾಣದ ಸಿನಿಮಾದಲ್ಲಿ ಅಭಿಷೇಕ್ ನಟಿಸುತ್ತಾರೆ ಅನ್ನೊ ಸುದ್ದಿ ಹರಿದಾಡುತ್ತಿದೆ.ಇಂತಹ ಸುದ್ದಿ ಹಬ್ಬಿರುವಾಗಲೇ ಅಭಿಷೇಕ್ ಜಿಮ್‍ನಲ್ಲಿ ಮತ್ತು ಮಾರ್ಷಲ್ ಆರ್ಟ್‍ನಲ್ಲಿ ಕಸರತ್ತು ಮಾಡುತ್ತಿರುವ ಕೆಲ ಫೋಟೋಗಳು ವೈರಲ್ ಆಗಿವೆ. ಈ ಫೋಟೋ ನೋಡಿದ ಮಂದಿ ಓಹೋ ಅಭಿಷೇಕ್ ಸಿನಿಮಾಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.ಆದಷ್ಟು ಬೇಗ ಅಭಿಷೇಕ್ ಚಿತ್ರರಂಗಕ್ಕೆ ಬರಲಿ, ಅಂಬಿಯಂತೆ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಲಿ ಅನ್ನೊದೆ ಕೋಟಿ ಕೋಟಿ ಅಭಿಮಾನಿಗಳ ಆಶಯ.
Comments