'ಬಿಗ್ ಬಾಸ್' ಮನೆಯೊಳಗೆ ಎಂಟ್ರಿ ಕೊಟ್ಟ ಮುದ್ದು ಕಂದಮ್ಮ
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಕ್ಕೆ ಒಂದು ಮುದ್ದು ಕಂದಮ್ಮ ಎಂಟ್ರಿಕೊಟ್ಟಿದೆ. ಹಾಗಂತ ಪುಟಾಣಿ ಮಗು 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟಿಲ್ಲ. ಬದಲಾಗಿ, ಮಗುವಿನ ಗೊಂಬೆಯೊಂದು 'ದೊಡ್ಮನೆ'ಯೊಳಗೆ ಬಂದಿದೆ.
ಹೌದು, ಮನೆಗೆ ಮಗುವಿನ ಗೊಂಬೆಯೊಂದನ್ನು ಕಳುಹಿಸುವ ಮೂಲಕ ಸ್ಪರ್ಧಿಗಳಿಗೆಲ್ಲ 'ಬಿಗ್ ಬಾಸ್' ಒಂದು ವಿಶೇಷ ಚಟುವಟಿಕೆ ನೀಡಿದ್ದಾರೆ. ಮಗುವಿನ ಗೊಂಬೆ ಯಾವ ಜೋಡಿ ಬಳಿ ಇರುತ್ತದೆಯೋ, ಅವರು ಅದನ್ನು ಎಚ್ಚರಿಕೆ ಹಾಗೂ ಕಾಳಜಿಯಿಂದ ನೋಡಿಕೊಳ್ಳಬೇಕು.ಮಗುವಿನ ಗೊಂಬೆಯನ್ನು ಗೊಂಬೆಯಂತೆ ಪರಿಗಣಿಸದೆ, ನಿಜವಾದ ಮಗುವಿನಂತೆ ಲಾಲನೆ, ಪೋಷಣೆ ಮಾಡುವ ಜವಾಬ್ದಾರಿ 'ಬಿಗ್ ಬಾಸ್' ಸ್ಪರ್ಧಿಗಳದ್ದು. ಸದ್ಯ ಅನುಪಮಾ ಗೌಡ ಹಾಗೂ ಶ್ರುತಿ ಪ್ರಕಾಶ್, ಜಯಶ್ರೀನಿವಾಸನ್ ಹಾಗೂ ರಿಯಾಝ್, ಜಗನ್ ಹಾಗೂ ಜೆಕೆ, ಸಮೀರಾಚಾರ್ಯ ಮತ್ತು ದಿವಾಕರ್, ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಜೋಡಿಯಾಗಿದ್ದಾರೆ.
ಈ ಜೋಡಿಗಳ ಪೈಕಿ ಕಾಲ ಕಾಲಕ್ಕೆ ಯಾರ ಜೊತೆ ಮಗು ಇರಬೇಕು ಅಂತ ನಿರ್ಧಾರ ಮಾಡುವವರು ಕ್ಯಾಪ್ಟನ್ ಕೃಷಿ ತಾಪಂಡ. ಈಗಾಗಲೇ, ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ, ಜಯಶ್ರೀನಿವಾಸನ್ ಹಾಗೂ ರಿಯಾಝ್, ಅನುಪಮಾ ಹಾಗೂ ಶ್ರುತಿ ಕೈಗೆ ಮಗು ಸೇರಿದ್ದಾಗಿದೆ.ಮಗುವಿಗೆ ಸ್ನಾನ ಮಾಡಿಸುವುದರಿಂದ ಹಿಡಿದು, ದೃಷ್ಟಿ ತೆಗೆದು, ಲಾಲಿ ಹಾಡಿ ಮಲಗಿಸುವುದರ ವರೆಗೂ ಈ ಜೋಡಿಗಳು ಮಗುವಿನ ಆರೈಕೆ ಮಾಡಿವೆ.
Comments