ಸರ್ಜಾ ಫ್ಯಾಮಿಲಿಯ ಮತ್ತೊಬ್ಬ ಹೀರೋ ಚಿತ್ರರಂಗಕ್ಕೆ ಎಂಟ್ರಿ



ಅರ್ಜುನ್ ಸರ್ಜಾ ನಂತರ ಈಗಾಗಲೇ ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ಕನ್ನಡದ ಚಿತ್ರರಂಗದಲ್ಲಿ ನಟರಾಗಿದ್ದಾರೆ. ಇನ್ನು ಧ್ರುವ ಸರ್ಜಾ ಬ್ಯಾಕ್ ಟು ಬ್ಯಾಕ್ ಮೂರು ಹಿಟ್ ಸಿನಿಮಾ ನೀಡಿದ್ದಾರೆ. ಆದರೆ ಇದೀಗ ಧ್ರುವ ಬಳಿಕ ಸರ್ಜಾ ಫ್ಯಾಮಿಲಿಯ ಮತ್ತೊಂದು ಕುಡಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದೆ.
ಅರ್ಜುನ್ ಸರ್ಜಾ ಅವರ ಸಂಬಂಧಿ ಪವನ್ ತೇಜ್ ಈಗ ಸಿನಿಮಾ ಮಾಡುತ್ತಿದ್ದಾರೆ. ಸಂಬಂಧದಲ್ಲಿ ಅರ್ಜುನ್ ಸರ್ಜಾ ಪವನ್ ಅವರಿಗೆ ಸೋದರ ಮಾವ ಆಗಬೇಕು. ಇನ್ನು 'ಅಥರ್ವ' ಸಿನಿಮಾದ ಮೂಲಕ ಪವನ್ ತೇಜ್ ತಮ್ಮ ಸಿನಿಜರ್ನಿ ಆರಂಭಿಸುತ್ತಿದ್ದಾರೆ.
ಪವನ್ ತೇಜ್ ಈಗಾಗಲೇ ಸಿನಿಮಾಗೆ ಬೇಕಾದ ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಅನೇಕ ನಾಟಕಗಳನ್ನು ಮಾಡಿ ನಟನೆಯ ಅನುಭವನ್ನು ಪಡೆದುಕೊಂಡಿದ್ದಾರೆ. ಇನ್ನು ತಮ್ಮ ಮೊದಲ ಸಿನಿಮಾವನ್ನು ಆಕ್ಷನ್ ಚಿತ್ರವಾಗಿ ಪವನ್ ಆಯ್ಕೆ ಮಾಡಿದ್ದಾರೆ. ಅರುಣ್ ಎಂಬುವವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.'ಅಥರ್ವ' ಸಿನಿಮಾದ ಕಥೆ ನಟ ಅರ್ಜುನ್ ಸರ್ಜಾ ಅವರಿಗೆ ಕೂಡ ಇಷ್ಟ ಆಗಿದೆಯಂತೆ. ಇದೇ ಕಾರಣದಿಂದ ಸಿನಿಮಾ ಮಾಡುವುದಕ್ಕೆ ಸಮ್ಮತಿ ಸೂಚಿಸಿದರಂತೆ. ಸದ್ಯ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲಿಯೇ ಆಡಿಯೋ ರಿಲೀಸ್ ಮಾಡಲಿದ್ದಾರಂತೆ.
Comments