ಪ್ರಿಯಾಂಕಾ ಚೋಪ್ರಾಗೆ ದೊರೆತಿರುವ ಪ್ರಶಸ್ತಿ ಯಾವುದು ಗೊತ್ತಾ ?

ಸಾಮಾಜಿಕ ನ್ಯಾಯಕ್ಕಾಗಿ ನೀಡುವ ಈ ವರ್ಷದ 'ಮದರ್ ತೆರೆಸಾ ಸ್ಮಾರಕ' ಪ್ರಶಸ್ತಿಯನ್ನು ಬಾಲಿವುಡ್ನ ಖ್ಯಾತ ನಟಿ ಪ್ರಿಯಾಂಕ ಛೋಪ್ರಾಗೆ ನೀಡಲಾಗಿದೆ. ಸಮಾಜ ಸೇವೆಗೆ ಆಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಇತ್ತೀಚೆಗಷ್ಟೆ ಸಿರಿಯಾಗೆ ಭೇಟಿ ನೀಡಿ ಅಲ್ಲಿನ ನಿರಾಶ್ರಿತ ಮಕ್ಕಳ ಜತೆ ಸಂವಾದ ನಡೆಸಿದ್ದರು.
ಯುನಿಸೆಫ್ ನ ಗುಡ್ ವಿಲ್ ಅಂಬಾಸಡರ್ ಆಗಿಯೂ ನಟಿ ಸೇವೆ ಸಲ್ಲಿಸುತ್ತಿದ್ದು, ನಾನಾ ಜನ ಕಲ್ಯಾಣ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಪ್ರಿಯಾಂಕ ಪರವಾಗಿ ತಾಯಿ ಮಧು ಛೋಪ್ರಾ ಪ್ರಶಸ್ತಿ ಸ್ವೀಕರಿಸಿದರು. ಈ ಹಿಂದೆ ಖ್ಯಾತನಾಮರಾದ ಕಿರಣ್ ಬೇಡಿ, ಅಣ್ಣಾ ಹಜಾರೆ, ಆಸ್ಕರ್ ಫರ್ನಾಂಡಿಸ್, ಸುಧಾ ಮೂರ್ತಿ, ಮಲಾಲ ಯೂಸಫ್ಜಾಯ್, ಸುಷ್ಮಿತಾ ಸೇನ್, ಬಿಲ್ಕಿಸ್ ಬನೋ ಎಧಿ ಈ ಪ್ರಶಸ್ತಿಯನ್ನು ಪಡೆದಿದ್ದಾರೆ.
Comments