ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನುಷ್ಕಾ,ಕೊಹ್ಲಿ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ, ನಿರ್ಮಾಪಕಿ ಅನುಷ್ಕಾ ಶರ್ಮಾ ಸೋಮವಾರ ಇಟಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ಇಟಲಿಯ ಟಸ್ಕಾನ್ ನಗರದ ಸಮೀಪವಿರುವ ಬೊರ್ಗೊ ಫಿನೊಚಿಯೆಟಾ ರೆಸಾರ್ಟ್ನಲ್ಲಿ 'ವಿರುಷ್ಕಾ', ಕುಟುಂಬದ ಆಪ್ತ ಗುರು, ಮಹಾರಾಜ್ ಅನಂತ ಬಾಬಾ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.
ಇಟಲಿ ದೇಶದ ಟಸ್ಕನಿ ಎಂಬಲ್ಲಿ ಅನ್ನೋದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ. ಈ ಸ್ಥಳ ಇರುವುದು ಇಟಲಿಯ ಮಿಲಾನ್ ನಿಂದ ನಾಲ್ಕು ತಾಸು ಪ್ರಯಾಣದಷ್ಟು ದೂರದಲ್ಲಿ. ಜಗತ್ತಿನಲ್ಲೇ ಎರಡನೇ ಅತಿ ದುಬಾರಿ ರಜಾ ತಾಣ ಇದಂತೆ. ಎರಡೂ ಕುಟುಂಬದ ಸದಸ್ಯರು ಹಾಗೂ ಆಯ್ದ ಸ್ನೇಹಿತರಷ್ಟೇ ಮದುವೆಯ ಸಂದರ್ಭದಲ್ಲಿ ಹಾಜರಿದ್ದು, ಶುಭ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.
Comments