' ಬಿಗ್ ಬಾಸ್' ಮನೆಯಲ್ಲಿ ಈ ವಾರದ ಕ್ಯಾಪ್ಟನ್ ಆದ ಕೃಷಿ

ಮನೆಯಿಂದ ಹೊರ ಹೋಗುವ ಮೊದಲು ಸಿಹಿಕಹಿ ಚಂದ್ರು ಅವರು ನೀಡಿದ್ದ ಅಧಿಕಾರದಂತೆ ಅನುಪಮಾ, ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆಗೆ ದಿವಾಕರ್, ಕೃಷಿ, ಜಯಶ್ರೀನಿವಾಸನ್ ಅವರನ್ನು ಆಯ್ಕೆ ಮಾಡಿದ್ದಾರೆ. ಇದರಲ್ಲಿ ನೀಡಲಾಗಿದ್ದ ಟಾಸ್ಕ್ ನಲ್ಲಿ ಕೃಷಿ ವಿಜೇತರಾಗಿದ್ದಾರೆ.
ಕ್ಯಾಪ್ಟನ್ ಕೃಷಿ ಅವರನ್ನು ಹೊರತುಪಡಿಸಿ, ಮನೆಯ ಸದಸ್ಯರನ್ನು 2 ಗುಂಪುಗಳಾಗಿ ಮಾಡಲಾಗಿದ್ದು, ಅವರಿಗೆ ಬಾಲ್ ಗಳನ್ನು ಆಯ್ಕೆ ಮಾಡಿಕೊಳ್ಳಲು ತಿಳಿಸಲಾಗಿತ್ತು. ಅದೇ ಬಣ್ಣದ ಬಾಲ್ ಗಳಿದ್ದ ಸದಸ್ಯರೊಂದಿಗೆ ಬೇಡಿ ಹಾಕಿ ಹೊಂದಾಣಿಕೆ, ಸಹಬಾಳ್ವೆ ಚಟುವಟಿಕೆ ನೀಡಲಾಗಿದೆ. ಸದಸ್ಯರು ಬೇಡಿ ಹಾಕಿಕೊಂಡೇ ಇರಬೇಕಿದೆ. ಇದರಲ್ಲಿ ಸಮೀರಾಚಾರ್ಯ - ದಿವಾಕರ್, ಜಯಶ್ರೀನಿವಾಸನ್ - ರಿಯಾಜ್, ಚಂದನ್ - ನಿವೇದಿತಾ, ಅನುಪಮಾ - ಶ್ರುತಿ, ಜಗನ್ - ಕಾರ್ತಿಕ್ ಜೊತೆಯಾಗಿದ್ದಾರೆ. ಜೊತೆಗೆ ಕನ್ ಫೆಷನ್ ರೂಂಗೆ ತೆರಳಿದ ಸದಸ್ಯರು ನಾಮಿನೇಷನ್ ಮಾಡಿದ್ದಾರೆ. ಇಬ್ಬರು ಸದಸ್ಯರಲ್ಲಿ ಮನೆಯಲ್ಲಿ ಉಳಿಯುವ ಮತ್ತು ಹೊರ ಹೋಗುವ ಸದಸ್ಯರನ್ನು ಆಯ್ಕೆ ಮಾಡಲು ತಿಳಿಸಲಾಗಿದೆ.
ಸದಸ್ಯರ ಆಯ್ಕೆಯನುಸಾರ ದಿವಾಕರ್, ಜಯಶ್ರೀನಿವಾಸನ್, ಚಂದನ್, ಶ್ರುತಿ ಹಾಗೂ ಜಗನ್ ಅವರು ನಾಮಿನೇಟ್ ಆಗಿದ್ದಾರೆ. ಇನ್ನು ಕ್ಯಾಪ್ಟನ್ ಕೃಷಿ, ಸಮೀರಾಚಾರ್ಯರನ್ನು ನೇರ ನಾಮಿನೇಟ್ ಮಾಡಿದ್ದಾರೆ. ಇದಕ್ಕೆ ಕಾರಣ ನೀಡಿದ ಕೃಷಿ, ಸುದೀಪ್ ಅವರು ಅಷ್ಟೆಲ್ಲಾ ಹೇಳಿದರೂ, ಇನ್ನೂ ಬದಲಾಗಿಲ್ಲದ ಕಾರಣ ಸಮೀರಾಚಾರ್ಯರನ್ನು ನಾಮಿನೇಟ್ ಮಾಡಿದ್ದಾಗಿ ತಿಳಿಸಿದ್ದಾರೆ. ದಿವಾಕರ್ ಅವರೊಂದಿಗೆ ನಾಮಿನೇಟ್ ಮಾಡಿಕೊಳ್ಳುವಾಗ ಬಚಾವ್ ಆದ ಸಮೀರಾಚಾರ್ಯ ಕ್ಯಾಪ್ಟನ್ ಅವರಿಂದ ನೇರ ನಾಮಿನೇಟ್ ಆಗಿದ್ದಾರೆ. ತಾವು ಫಲಕ ಹಾಕಿಕೊಂಡ ವಿಚಾರದ ಕುರಿತಾಗಿ ಅವರು ದಿವಾಕರ್ ರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ್ದಾರೆ.
Comments