ಸಾಮಾನ್ಯರಲ್ಲಿ ಅಸಾಮಾನ್ಯ 'ಬಿಗ್ ಬಾಸ್' ಸ್ಪರ್ಧಿ ರಿಯಾಜ್‌‌ ಬಾಷಾ

11 Dec 2017 1:05 PM | Entertainment
343 Report

ಬಿಗ್‌‌ಬಾಸ್‌‌ಗೆ ಎಂಟ್ರಿ ಕೊಟ್ಟ ರಿಯಾಜ್‌‌, ಯಾವ ಸೆಲಿಬ್ರಿಟಿಗಳಿಗೂ ಕಡಿಮೆ ಇಲ್ಲ. ಅವರ ಸಾಧನೆಗಳ ಬಗ್ಗೆ ತಿಳಿಯಬೇಕೆಂದರೆ ಈ ಸ್ಟೋರಿ ಓದಿ. ಪ್ರತಿದಿನ ಟಿವಿಯಲ್ಲಿ ಬಹಳಷ್ಟು ಜಾಹೀರಾತುಗಳನ್ನು ನೀವು ನೋಡಿರುತ್ತೀರಿ. ಕರ್ನಾಟಕದ ಜನರಿಗೆ ರಿಯಾಜ್ ಬಾಷಾ ಹೊಸಬರು. ಆದರೆ ಬಾಲಿವುಡ್‌‌‌‌‌‌ ಈವೆಂಟ್‌‌‌‌‌, ಕಾರ್ಪೊರೇಟ್‌‌, ಅಡ್ವರ್ಟೈಸ್‌‌‌‌ಮೆಂಟ್‌‌‌, ವಾಯ್ಸ್‌‌‌‌ ಓವರ್‌ ಕ್ಷೇತ್ರಗಳಲ್ಲಿ ರಿಯಾಜ್ ಬಹಳಷ್ಟು ಹೆಸರು ಮಾಡಿದ್ದಾರೆ.

ಬಹುತೇಕ ಜಾಹೀರಾತುಗಳಲ್ಲಿ ಬರುವ ಹಿನ್ನೆಲೆ ಧ್ವನಿ ರಿಯಾಜ್ ಅವರದು. ಆಶ್ಚರ್ಯ ಎನಿಸಿದರೂ ಸತ್ಯ. ಓದು ಮುಗಿಸಿ ಬಾಂಬೆಯ ವರ್ಲ್ಡ್‌‌ ಸ್ಪೇಸ್‌ ಸ್ಯಾಟಲೈಟ್ ರೇಡಿಯೋನಲ್ಲಿ ಆರ್‌ಜೆ ಆಗಿ ಕೆರಿಯರ್ ಆರಂಭಿಸಿದ್ದಾರೆ. ಇದರ ಜೊತೆ ಜೊತೆಗೆ ಜಾಹೀರಾತುಗಳಲ್ಲಿ ವಾಯ್ಸ್‌‌ ಓವರ್‌‌‌‌, ಬಾಲಿವುಡ್ , ಟಾಲಿವುಟ್‌‌‌, ಕಾಲಿವುಡ್‌‌‌‌‌‌‌‌‌‌ ಹಾಗೂ ಕಾರ್ಪೋರೆಟ್‌ ಈವೆಂಟ್‌ಗಲ್ಲಿ ಆ್ಯಂಕರಿಂಗ್ ಆಗಿ ಕೆಲಸ ಮಾಡಿರುವ ರಿಯಾಜ್‌ ಇಂದು ಕನ್ನಡ, ಹಿಂದಿ, ಇಂಗ್ಲೀಷ್‌‌‌, ತೆಲುಗು, ಉರ್ದು, ತಮಿಳು ಭಾಷೆಗಳನ್ನು ನೀರು ಕುಡಿದಷ್ಟೇ ಸುಲಭವಾಗಿ ಮಾತನಾಡುತ್ತಾರೆ.

ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಜನರಿಗೆ ರಿಯಾಜ್‌‌‌ ಬಹಳ ಪರಿಚಿತರು. ಹೊರದೇಶಗಳಲ್ಲಿ ಕೂಡಾ ಬಹಳಷ್ಟು ಕಾರ್ಯಕ್ರಮಗಳನ್ನು ರಿಯಾಜ್ ನಡೆಸಿಕೊಟ್ಟಿದ್ದಾರೆ. ಅಲ್ಲದೆ,  ಬಹಳಷ್ಟು ಸಿನಿಮಾ ನಟರಿಗೆ ರಿಯಾಜ್ ಧ್ವನಿ ನೀಡಿದ್ದಾರೆ. ಸೆಲಿಬ್ರಿಟಿಸ್ ಫಂಕ್ಷನ್ ಮಾತ್ರವಲ್ಲದೆ ಪ್ರಾಡೆಕ್ಟ್‌‌ ರಿಲೀಸ್‌, ಫ್ಯಾಮಿಲಿ ಶೋ , ಕ್ರಿಕೆಟ್‌ ಚಾಂಪಿಯನ್‌ಶಿಪ್‌ ಲೀಗ್‌‌‌, ಫ್ಯಾಶನ್‌ ಶೋ, ಸೇರಿದಂತೆ  ಕಳೆದ 14 ವರ್ಷಗಳಿಂದ ಸುಮಾರು 2000 ಶೋಗಳ ಮೂಲಕ ಜನರನ್ನು ರಂಜಿಸಿದ್ದಾರೆ. ಇವರು ಮೈಕ್ ಹಿಡಿದು ಸ್ಟೇಜ್ ಮೇಲೆ ಬಂದರೆ ಸಮಯ ಕಳೆಯುವುದೇ ತಿಳಿಯುವುದಿಲ್ಲ. ಇಂದು ರಿಯಾಜ್ ಹೆಚ್ಚು ಬೇಡಿಕೆ ಇರುವ ಭಾರತದ ನಂಬರ್ ಒನ್ ಆ್ಯಂಕರ್ ಎಂದು ಹೇಳಿದರೆ ತಪ್ಪಿಲ್ಲ. ಇವರ ಈ ಸಾಧನೆಗೆ ಬಹಳಷ್ಟು ಅವಾರ್ಡ್‌‌‌ ಕೂಡಾ ಬಂದಿದೆ. ಒಟ್ಟಿನಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿ ಪರಿಚಿತರಾದರೂ ಅಪರಿಚಿತರಂತೆ ಇರುವ ರಿಯಾಜ್ , ಕಾಮನ್ ಮ್ಯಾನ್ ಅಥವಾ ಸೆಲಿಬ್ರಿಟಿಯೋ ನೀವೇ ನಿರ್ಧರಿಸಬೇಕು.

Edited By

Hema Latha

Reported By

Madhu shree

Comments