'ಬಿಗ್ ಬಾಸ್' ಮನೆಯ ಅನುಭವದ ಬಗ್ಗೆ ಆಶಿತಾ ಹೇಳಿದ್ದೇನು?
ವೇದಿಕೆಯಲ್ಲಿ ಕಾಣಿಸಿಕೊಂಡ ಆಶಿತಾ ಅವರು, 'ಬಿಗ್ ಬಾಸ್' ಸ್ಪರ್ಧಿಗಳ ಕುರಿತಾಗಿ ಅನಿಸಿಕೆ ಹಂಚಿಕೊಂಡಿದ್ದಾರೆ. 'ಜಗನ್, ಅನುಪಮಾ, ಸಿಹಿಕಹಿ ಚಂದ್ರು ಆತ್ಮೀಯರಾಗಿದ್ದರು. ಮನೆಯೊಳಗೆ 57 ದಿನಗಳ ಕಾಲ ಪಡೆದ ಅನುಭವ ವಿಭಿನ್ನವಾಗಿತ್ತು. ಮನೆಯಿಂದ ಹೊರಗೆ ಬಂದಿದ್ದು ಬೇಜಾರಾಗಿದೆ' ಎಂದು ತಿಳಿಸಿದ್ದಾರೆ.
ಮನೆಯೊಳಗೆ ಅವರು ಕಳೆದ ಕ್ಷಣಗಳನ್ನು ತೆರೆ ಮೇಲೆ ನೋಡಿದ ಆಶಿತಾ ಭಾವುಕರಾಗಿದ್ದಾರೆ. ತಮ್ಮ ತಂದೆ ಬರೆದ ಪತ್ರವನ್ನು ಓದಿದಾಗ, ವೇದಿಕೆ ಮೇಲೆ ತಂದೆ ಕಾಣಿಸಿಕೊಂಡಾಗ ಅವರು ಕಣ್ಣೀರಿಟ್ಟಿದ್ದಾರೆ.ಮನೆಯಿಂದ ಹೊರ ಬಂದ ಕಾರಣ ತಿಳಿದಿಲ್ಲ ಎಂದು ಆಶಿತಾ ಹೇಳಿದಾಗ, ಸುದೀಪ್, ಗಿಣಿಯಾಗಿ ತೋರಿದ ಉತ್ಸಾಹ ಮೊದಲಿನಂತೆ ಇದ್ದಿದ್ರೆ ಬರುತ್ತಿರಲಿಲ್ಲವೇನೋ? ಎಂದು ಹೇಳಿದ್ದಾರೆ. ಆಶಿತಾ ಪ್ರಕಾರ, ಫಿನಾಲೆಗೆ ಚಂದನ್, ಕಾರ್ತಿಕ್, ಜಯಶ್ರೀನಿವಾಸನ್, ಅನುಪಮಾ, ಜಗನ್ ಬರಬಹುದು. ಚಂದನ್ ಗೆಲ್ಲಬಹುದು. ಮುಂದಿನ ವಾರ ಶ್ರುತಿ ಮನೆಯಿಂದ ಹೊರ ಬರಬಹುದಾಗಿದೆ. 'ಬಿಗ್ ಬಾಸ್' ಮನೆಯಲ್ಲಿ 57 ದಿನಗಳ ಕಾಲ ಇದ್ದ ಆಶಿತಾ ಹೊರಗೆ ಬಂದಿದ್ದು, ಮನೆಯೊಳಗಿನ ಅನುಭವವನ್ನು ಹೇಳಿಕೊಂಡಿದ್ದಾರೆ. 'ಸೂಪರ್ ಸಂಡೇ ವಿತ್ ಸುದೀಪ' ವೇದಿಕೆಯಲ್ಲಿ ಸುದೀಪ್ ಅವರೊಂದಿಗೆ 'ಬಿಗ್ ಬಾಸ್' ಕುರಿತಾಗಿ ಮಾತನಾಡಿದ್ದಾರೆ.
Comments