ಮೊದಲ ಬಾರಿಗೆ ಡಿಫರೆಂಟ್ ಕ್ಯಾರೆಕ್ಟರ್ ನಲ್ಲಿ ಪುನೀತ್ ರಾಜ್ ಕುಮಾರ್

ಪುನೀತ್ ಈಗ ಅಂಜನಿ ಪುತ್ರ ಸಿನಿಮಾ ಮುಗಿಸಿ ಹೊಸ ಸಿನಿಮಾಕ್ಕೆ ರೆಡಿಯಾಗಿದ್ದಾರೆ. ಅದಕ್ಕಾಗಿ ಹೊಸ ಗೆಟಪ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಚಿತ್ರವನ್ನು ಶಶಾಂಕ್ ನಿರ್ದೇಶನ ಮಾಡುತ್ತಿದ್ದಾರೆ. ಹಾಗೆಯೇ ಇದೇ ಸಿನಿಮಾಕ್ಕಾಗಿ ಪುನೀತ್ ಸಿಕ್ಸ್ ಪ್ಯಾಕ್ ಮಾಡಿಕೊಳ್ಳುತ್ತಿರುವುದು, ಕೆನ್ನೆ ತುಂಬಾ ದಾಡಿ ಬಿಡುತ್ತಿರುವುದೂ ಎಲ್ಲರಿಗೂ ಗೊತ್ತು. ಆದರೆ ಇದೀಗ ಬಂದಿರುವ ತಾಜಾ ಖಬರ್ ಮಾತ್ರ ಪುನೀತ್ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.
ಇದೇ ಮೊದಲ ಬಾರಿಗೆ ಪುನೀತ್ ವಿಭಿನ್ನ ಗೆಟಪ್‍ಗಾಗಿ ಬೆವರು ಹರಿಸುತ್ತಿದ್ದಾರೆ. ಅದೇ ಅವರನ್ನು ಇಪ್ಪತ್ತು ವರ್ಷದ ಹರೆಯದ ಹುಡುಗನ ಲುಕ್ಕಿಗೆ ಕಾರಣವಾಗುತ್ತಿದೆ. ಏನಿದು ಸಸ್ಪೆನ್ಸ್ ಆಫ್ ಶಶಾಂಕ್ ಸಿನಿಮಾ? ಹೀಗೊಂದು ಅನುಮಾನ ನಿಮ್ಮನ್ನು ಕಾಡುವುದು ಸಹಜ. ಅಲ್ಲೇ ಇರುವುದು ಕಹಾನಿ ಮೇ ಟ್ವಿಸ್ಟ್. ಅಂದರೆ ಬಹುಶಃ ಪುನೀತ್ ಎರಡು ಡಿಫರೆಂಟ್ ಶೇಡ್‍ನಲ್ಲಿ ಮಿಂಚಲಿದ್ದಾರೆ. ಇಪ್ಪತ್ತರ ಹರೆಯದ ಹುಡುಗನಾಗುವುದು ಅಷ್ಟು ಸುಲಭವಲ್ಲ. ಕೇವಲ ದಾಡಿ ಮೀಸೆಯನ್ನು ತೆಗೆದು, ಜೀನ್ಸ್, ಟೀ-ಶರ್ಟ್ ಹಾಕಿದರೆ ಮಾತ್ರ ಆ ಲುಕ್ ಬರುವುದಿಲ್ಲ. ಹೀಗಾಗಿಯೇ ಪುನೀತ್ ಡಯಟ್ ಮಾಡುತ್ತಿದ್ದಾರೆ. ಒಂದು ಕಡೆ ಸಿಕ್ಸ್ ಪ್ಯಾಕ್ ರಾಜಕುಮಾರ, ಇನ್ನೊಂದು ಕಡೆ ಹರೆಯದ ರಾಜರತ್ನ. ಎರಡು ಶೇಡ್‍ನಲ್ಲಿ ಪುನೀತ್ ಹೇಗೆ ಕಾಣಿಸುತ್ತಾರೆ? ಅದ್ಯಾವ ರೀತಿ ಶಶಾಂಕ್ ಈ ಎರಡು ಪಾತ್ರಗಳನ್ನು ಸೃಷ್ಟಿಸಿದ್ದಾರೆ? ಅದಕ್ಕೆಲ್ಲ ಉತ್ತರ ಈಗಂತೂ ಸಿಗುವುದಿಲ್ಲ.
Comments