ನಂಜುಂಡಿ ಕಲ್ಯಾಣ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಎ ಅರ್ಹತಾ ಪತ್ರ

09 Dec 2017 1:47 PM | Entertainment
471 Report

ನಂಜುಂಡಿ ಕಲ್ಯಾಣ' ಚಿತ್ರವನ್ನ ರಾಜೇಂದ್ರ ಕಾರಂತ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕರದ್ದೇ. `ಮಡಮಕ್ಕಿ'ಯನ್ನು ನಿರ್ಮಿಸಿದ್ದ ಶ್ರೀರಾಮಾ ಟಾಕೀಸ್ ಲಾಂಛನದಲ್ಲೇ ತಯಾರಾಗಿರುವ `ನಂಜುಂಡಿ ಕಲ್ಯಾಣ'ದ ನಾಯಕಿಯಾಗಿ ಶ್ರಾವ್ಯ ಅಭಿನಯಿಸಿದ್ದಾರೆ.

ಕುರಿ ಪ್ರತಾಪ್, ರಾಜೇಂದ್ರ ಕಾರಂತ್, ಪದ್ಮಜಾರಾವ್ ಹಾಗೂ ಬಹುತೇಕ ರಂಗಭೂಮಿ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ಅನೂಪ್ ಸೀಳಿನ್ ಸಂಗೀತ, ಮಂಜುನಾಥ್ ನಾಯಕ್ ಛಾಯಾಗ್ರಹಣ, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮತ್ತು ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

Edited By

Shruthi G

Reported By

Madhu shree

Comments