ವೀಕ್ಷಕರಿಗೆ ಸರಿಗಮಪ ಲಿಟ್ಲ್ ಚಾಂಪ್ಸ್14 ರಸದೌತಣ

ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು 'ಸರಿಗಮಪ ಲಿಟ್ಲ್ ಚಾಂಪ್ಸ್'ನಲ್ಲಿ ಮಹಾಗುರುವಾಗಿ ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕ ವಿಜಯ ಪ್ರಕಾಶ್ ಅವರು ತೀರ್ಪುಗಾರರಾಗಿರುತ್ತಾರೆ. 15 ಜ್ಯೂರಿ ಮೆಂಬರ್ಸ್ ಅಂಕ ನೀಡಲಿದ್ದಾರೆ.
ರಾಜ್ಯದ 30 ಜಿಲ್ಲೆಗಳಲ್ಲಿ ಆಡಿಷನ್ ನಡೆಸಿ ಪ್ರತಿಭಾನ್ವಿತರನ್ನು ಆಯ್ಕೆ ಮಾಡಲಾಗಿದೆ. ಮೆಗಾ ಆಡಿಷನ್ ನಲ್ಲಿ 30 ಮಕ್ಕಳು ಸ್ಪರ್ಧಿಗಳಾಗಿ ಪಾಳ್ಗೊಳ್ಳಲಿದ್ದಾರೆ. ತೀರ್ಪುಗಾರರ ಕಣ್ಣಿಗೆ ಬಟ್ಟೆ ಕಟ್ಟಲಿದ್ದು, ಅದನ್ನು ತಮ್ಮ ಹಾಡಿನ ಮೂಲಕ ತೆಗೆಸುವ ಸ್ಪರ್ಧಿಗಳು ಈ ಸೀಸನ್ ನಲ್ಲಿ ಅವಕಾಶ ಪಡೆಯಲಿದ್ದಾರೆ. ಡಿಸೆಂಬರ್ 9 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ 'ಸರಿಗಮಪ ಲಿಟ್ಲ್ ಚಾಂಪ್ಸ್' ಅನ್ನು ಕಣ್ತುಂಬಿಕೊಳ್ಳಬಹುದಾಗಿದೆ.
Comments