ಬಿಗ್ ಬಾಸ್ ಸರ್ಕಸ್ ನಲ್ಲಿ ವಿವಿಧ ಪ್ರದರ್ಶನಗಳ ಮೂಲಕ ರಂಜಿಸಿದ ಸದಸ್ಯರು
'ಬಿಗ್ ಬಾಸ್'ನಲ್ಲಿ ಈ ವಾರ ನೀಡಲಾಗಿದ್ದ 'ಗಂಧದಗುಡಿ' ಲಕ್ಸುರಿ ಬಜೆಟ್ ಟಾಸ್ಕ್ ಅಂತ್ಯದಲ್ಲಿ ಮಾಸ್ಟರ್ ಅಕುಲ್ ಬಾಲಾಜಿ ನಡೆಸಿಕೊಟ್ಟ ಸರ್ಕಸ್ ಮನರಂಜಿಸಿದೆ. ಹುಲಿಯಾಗಿದ್ದ ಜಗನ್ ರಿಂಗ್ ನಲ್ಲಿ ಹಾರಿದರೆ, ಕೋತಿಯಾಗಿದ್ದ ದಿವಾಕರ್, ಅನುಪಮಾ, ಕರಡಿಯಾಗಿ ಸಮೀರಾಚಾರ್ಯ, ಗಿಳಿಯಾಗಿ ಆಶಿತಾ, ಆನೆಯಾಗಿ ನಿವೇದಿತಾ ಹಾಗೂ ರಿಯಾಜ್ -ಕೃಷಿ, ಕಾರ್ತಿಕ್ -ಜಯಶ್ರೀನಿವಾಸನ್ ವಿವಿಧ ಪ್ರದರ್ಶನ ನೀಡಿದ್ದಾರೆ.
ಚಂದನ್ ಮತ್ತು ಶ್ರುತಿ ಹಿಮ್ಮೇಳದಲ್ಲಿ ಸಂಗೀತ ನೀಡಿದ್ದಾರೆ. ಮಾಸ್ಟರ್ ಅಕುಲ್ ಬಾಲಾಜಿ ಸರ್ಕಸ್ ನಿರೂಪಣೆ ಮಾಡಿದ್ದು, ವಿಶೇಷವಾಗಿತ್ತು. ಮನೆಯೊಳಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದಿದ್ದ ನಟಿ ವೈಷ್ಣವಿ ಅನಾರೋಗ್ಯದ ಕಾರಣದಿಂದ ಮನೆಯಿಂದ ಹೊರಗೆ ಹೋಗಿದ್ದಾರೆ. ಇದಕ್ಕಿಂತ ಮೊದಲು ಇಲ್ಲಿರಲು ಆಗುತ್ತಿಲ್ಲ ಎಂದು ಹೇಳಿಕೊಂಡಿದ್ದು, ಅವರಿಗೆ ಅಕುಲ್ 'ಬಿಗ್ ಬಾಸ್' ಬಳಿ ವಿನಂತಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಸರ್ಕಸ್ ಪ್ರದರ್ಶನ ಮುಕ್ತಾಯವಾದ ಬಳಿಕ ಅಕುಲ್ ಬಾಲಾಜಿ ಮನೆಯಿಂದ ಹೊರಗೆ ಹೋಗಿದ್ದಾರೆ. ಮತ್ತೊಮ್ಮೆ 'ಬಿಗ್ ಬಾಸ್' ಮನೆಯೊಳಗೆ ಬಂದು 1 ವಾರ ಇದ್ದಿದ್ದು ವಿಭಿನ್ನ ಅನುಭವ ನೀಡಿದೆ ಎಂದು ಹೇಳಿದ್ದಾರೆ. ಅಲ್ಲದೇ, ತಾವು ಯಾರಿಗಾದರೂ ನೋವು ಮಾಡಿದ್ದರೆ, ಕ್ಷಮಿಸಿ ಎಂದು ಸದಸ್ಯರ ಬಳಿ ಹೇಳಿದ್ದಾರೆ. ಅವರಿಗೆ ಎಲ್ಲಾ ಸದಸ್ಯರು ಬೀಳ್ಕೊಟ್ಟಿದ್ದಾರೆ.
Comments