ಬಿಗ್ ಬಾಸ್' : ಗಂಧದಗುಡಿ ಟಾಸ್ಕ್ ನಲ್ಲಿ ಸದಸ್ಯರ ನಡುವೆ ಪೈಪೋಟಿ

'ಬಿಗ್ ಬಾಸ್' ಮನೆಯಲ್ಲಿ 'ಗಂಧದಗುಡಿ' ಟಾಸ್ಕ್ ನಲ್ಲಿ ಮನೆ ಕಾಡಿನಂತಾಗಿದ್ದು, ಪ್ರಾಣಿಗಳಾಗಿದ್ದ ಸದಸ್ಯರು ಮತ್ತು ಕಾಡು ಮನುಷ್ಯರಾಗಿರುವ ಸದಸ್ಯರ ನಡುವೆ ಪೈಪೋಟಿ ಮುಂದುವರೆದಿದೆ. ಮಾಸ್ಟರ್ ಅಕುಲ್ ಬಾಲಾಜಿ ಮತ್ತು ಕಾಡು ಮನುಷ್ಯರು ಸೇರಿ ಪ್ರಾಣಿಗಳಿಗೆ ವಿವಿಧ ತರಬೇತಿ ನೀಡಿದ್ದು, ಸರ್ಕಸ್ ಗಾಗಿ ತಯಾರಿ ಜೋರಾಗಿ ನಡೆದಿದೆ. ಹುಲಿಯಾಗಿರುವ ಜಗನ್ ರಿಂಗ್ ನಲ್ಲಿ ಹಾರಿದ್ದು, ಗಮನ ಸೆಳೆಯುವಂತಿತ್ತು.
ಪ್ರಾಣಿಗಳನ್ನು ಬೋನಿನಲ್ಲಿ ಕೂಡಿ ಹಾಕಲಾಗಿದೆ. ಕಾಡು ಮನುಷ್ಯರಿಗೆ ಮರದಲ್ಲಿದ್ದ ಹಣ್ಣುಗಳನ್ನು ರಕ್ಷಿಸಿಕೊಳ್ಳಲು ತಿಳಿಸಲಾಗಿತ್ತು. ಇವುಗಳನ್ನು ಬೋನಿನಲ್ಲಿದ್ದ ಪ್ರಾಣಿಗಳು ಹೊರಬಂದು ಕಿತ್ತುಕೊಳ್ಳಲು ಸೂಚಿಸಿದ್ದು, ಹೆಚ್ಚುವರಿ ಹಣ್ಣು ಉಳಿಸಿಕೊಂಡ ತಂಡ ವಿಜೇತವಾಗಲಿದ್ದು, ಹೆಚ್ಚುವರಿಯಾಗಿ 1000 ಲಕ್ಸುರಿ ಬಜೆಟ್ ಪಾಯಿಂಟ್ ಕೊಡುವುದಾಗಿ ಹೇಳಲಾಗಿದೆ. ಇದರಲ್ಲಿ ಪ್ರಾಣಿಗಳ ತಂಡದವರು ಹಣ್ಣು ಸಂಗ್ರಹಿಸಿ ಜಯಗಳಿಸಿದ್ದಾರೆ. ಸರ್ಕಸ್ ಗಾಗಿ ಪ್ರಾಣಿಗಳಿಗೆ ತರಬೇತಿ ನೀಡುವಂತೆ ಮಾಸ್ಟರ್ ಗೆ ತಿಳಿಸಿದ್ದು, ಇದಕ್ಕಿಂತ ಮೊದಲು ಮೂಳೆ ಸಂಗ್ರಹಿಸಿದ ಕಾಡು ಮನುಷ್ಯರಲ್ಲಿ ಒಬ್ಬರು ತರಬೇತುದಾರರಾಗಲಿದ್ದಾರೆಂದು ತಿಳಿಸಲಾಗಿದೆ. ಜಯಶ್ರೀನಿವಾಸನ್ ಮೊದಲಿಗೆ ಮೂಳೆ ಸಂಗ್ರಹಿಸಿದ್ದು ಅವರು ತರಬೇತುದಾರರಾಗಿದ್ದಾರೆ. ಅವರಿಗೆ ಕೋತಿಯಾಗಿದ್ದ ದಿವಾಕರ್ ಇನ್ನಿಲ್ಲದ ಕಾಟ ಕೊಟ್ಟಿದ್ದಾರೆ. ಜಯಶ್ರೀನಿವಾಸನ್ ಹಾವು ರೀತಿ ಡ್ಯಾನ್ಸ್ ಮಾಡಿದ್ದು, ಇದಕ್ಕೆ ಚಂದನ್ ಹಿನ್ನಲೆ ಸಂಗೀತ ನೀಡಿದ್ದು, ತಮಾಷೆಯಾಗಿತ್ತು. ಈ ನಡುವೆ ವೈಷ್ಣವಿ ಮತ್ತು ಅನುಪಮಾ ಅವರು ಅಸ್ವಸ್ಥರಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
Comments