ಸುಧಾರಾಣಿಯವರ ಮಗಳು ಬೆಳ್ಳಿ ತೆರೆಗೆ ಎಂಟ್ರಿ
ಕನ್ನಡ ಚಿತ್ರರಂಗದ ಖಳನಾಯಕನ ಪಾತ್ರದಲ್ಲಿ ಪ್ರಖ್ಯಾತಿಯಾದ ಕೀರ್ತಿರಾಜ್ ಅವರ ಪುತ್ರ ಧರ್ಮ ಕೀರ್ತಿರಾಜ್ ನಟನೆಯ ಹೊಸ ಚಿತ್ರ 'ಇದು ಚಕ್ರವ್ಯೂಹ'ಕ್ಕೆ ಸುಧಾರಾಣಿಯವರ ಮಗಳು ನಿಧಿ ಗೋವರ್ಧನ್ ಆಯ್ಕೆಯಾಗಿದ್ದಾರೆ.
ನಟಿ ಸುಧಾರಾಣಿಯವರು ತಮ್ಮ 12ನೇ ವಯಸ್ಸಿನಲ್ಲಿ ಶಿವರಾಜ್ ಕುಮಾರ್ ಅಭಿನಯದ 'ಆನಂದ' ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಅಂದು ಆ ಚಿತ್ರ ಸೂಪರ್ ಹಿಟ್ ಆಗಿ ಕನ್ನಡ ಚಿತ್ರರಸಿಕರ ಮನದಲ್ಲಿ ಆಳವಾಗಿ ಬೇರೂರಿದರು. ಈಗ ತಮ್ಮ ಮಗಳನ್ನು ಕೂಡ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲು ಹೊರಟ್ಟಿದ್ದಾರೆ. ಅಷ್ಟೇ ಅಲ್ಲ ನಿಜ ಜೀವನದ ಈ ತಾಯಿ ಮಗಳು ಈ ಚಿತ್ರದಲ್ಲೂ ಕೂಡ ಅದೇ ಪಾತ್ರವನ್ನು ಮಾಡಲಿದ್ದಾರೆ. ಹೌದು ಸುಧಾರಾಣಿಯವರು ಕೂಡ ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಒಟ್ಟಿನಲ್ಲಿ ತಾಯಿಯಂತೆ ಮಗಳು ಕೂಡ ಬೆಳ್ಳಿತೆರೆಯಲ್ಲಿ ಮಿಂಚಿ ಕನ್ನಡ ಚಿತ್ರರಸಿಕರ ಮನಗೆಲ್ಲಲ್ಲಿ ಅನ್ನುವುದು ಅನೇಕರ ಆಶಯ.
Comments