'ಬಿಗ್ ಬಾಸ್' ಮನೆಯಲ್ಲಿ ಸದಸ್ಯರ ನಡುವೆ ಕಾದಾಟ
ಮನುಷ್ಯರು ಹಾಗೂ ಪ್ರಾಣಿಗಳ ನಡುವಿನ ಬಾಂಧವ್ಯವನ್ನು ಪರಿಚಯಿಸುವ ಸಲುವಾಗಿ 'ಬಿಗ್ ಬಾಸ್' ಗಂಧದಗುಡಿ ಲಕ್ಸುರಿ ಬಜೆಟ್ ಟಾಸ್ಕ್ ನೀಡಿದ್ದಾರೆ. ಕಾಡುಪ್ರಾಣಿಗಳು, ಕಾಡು ಮನುಷ್ಯರ ನಡುವೆ, ಮನೆಯ ವಿಶೇಷ ಅತಿಥಿ ಅಕುಲ್ ನಾಡಿನಿಂದ ಕಾಡಿಗೆ ಬಂದ ಮಾಸ್ಟರ್ ಆಗಿದ್ದಾರೆ.
ಒಂದು ಗುಂಪು ಹೊರ ಜಗತ್ತಿನ ಸಂಪರ್ಕವಿಲ್ಲದ ಕಾಡು ಜನರಾಗಿ, ಮತ್ತೊಂದು ಗುಂಪು ಕಾಡುಪ್ರಾಣಿಗಳಾಗಿದ್ದು, ಸದಸ್ಯರ ನಡುವೆ ಜಗಳ, ಕೋಪ, ಮಾತಿನ ಚಕಮಕಿ ಜೋರಾಗಿ ನಡೆದಿದೆ. ಸಮೀರಾಚಾರ್ಯ, ಜಗನ್, ದಿವಾಕರ್, ಅನುಪಮಾ, ನಿವೇದಿತಾ, ಆಶಿತಾ ಅವರು ಪ್ರಾಣಿಗಳಾಗಿ, ಕಾರ್ತಿಕ್, ಚಂದನ್, ವೈಷ್ಣವಿ, ಶ್ರುತಿ, ಜಯಶ್ರೀನಿವಾಸನ್, ಕೃಷಿ, ರಿಯಾಜ್ ಕಾಡು ಜನರಾಗಿದ್ದಾರೆ. ಮಾಸ್ಟರ್ ಅಕುಲ್ ಬಾಲಾಜಿಗೆ ಕಾಡು ಮನುಷ್ಯರನ್ನು ಬಳಸಿಕೊಂಡು, ಪ್ರಾಣಿಗಳನ್ನು ಸೆರೆ ಹಿಡಿಯಲು ತಿಳಿಸಲಾಗಿದೆ. ಇದಕ್ಕೆ ಬಲೆಗಳನ್ನು ಬಳಸಬೇಕೆಂದು ಸೂಚಿಸಲಾಗಿದೆ. ಈ ಪ್ರಯತ್ನದಲ್ಲಿ ಅಕುಲ್ ಬಾಲಾಜಿ ಮತ್ತು ಜಗನ್ ನಡುವೆ ಹಲವು ಸಲ ಜಗಳವಾಗಿದೆ. ದಿವಾಕರ್ ಮತ್ತು ರಿಯಾಜ್ ಅವರ ನಡುವೆಯೂ ಅನೇಕ ಬಾರಿ ಮಾತಿನ ಚಕಮಕಿ ನಡೆದಿದ್ದು, ಏಕವಚನದಲ್ಲಿಯೇ ಮಾತಾಡಿಕೊಂಡಿದ್ದಾರೆ. ಸಮೀರಾಚಾರ್ಯ ಮತ್ತು ಅಕುಲ್ ಬಾಲಾಜಿ ನಡುವೆಯೂ ಮಾತಿನ ಚಕಮಕಿ ನಡೆದಿದೆ. ಪ್ರಾಣಿಗಳನ್ನು ಹಿಡಿಯುವ ಪ್ರಯತ್ನದಲ್ಲಿ ಹಲವಾರು ಬಾರಿ ಜಗಳ ನಡೆದಿದ್ದು, ಪ್ರಾಣಿಗಳಿಗೆ ಊಟ, ನೀರು ಕೊಡದೇ ಸತಾಯಿಸಿದ್ದಾರೆ. ಕೊನೆಗೆ ಅನುಪಮಾ ಅವರೇ ನೇರವಾಗಿ ಬೋನಿಗೆ ಹೋಗಿದ್ದಾರೆ. ಇದಾದ ಬಳಿಕ ಪ್ರಾಣಿಗಳಾಗಿದ್ದ ಹಲವರನ್ನು ಬೋನಿಗೆ ಹಾಕಲಾಗಿದೆ. ಆಟದಲ್ಲಿ ಅನೇಕರಿಗೆ ಪೆಟ್ಟಾಗಿದೆ.
Comments