' ದಿ ವಿಲನ್' ಚಿತ್ರದ ಬಗ್ಗೆ ನಿರ್ದೇಶಕ ಪ್ರೇಮ್ ಸಿಹಿ ಸುದ್ದಿ ನೀಡಿದ್ದಾರೆ ..?
ಹೌದು.. ಮಲ್ಟಿಸ್ಟಾರ್ ನಟಿಸಿರುವ 'ದಿ ವಿಲನ್' ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದ್ದು, ಸದ್ಯದ ಸ್ವೀಟ್ ನ್ಯೂಸ್ ಏನಪ್ಪಾ ಅಂದ್ರೆ..? ವಿಲನ್ ಸಿನಿಮಾದ ಟೀಸರ್ ಇದೇ ವಾರ ರಿಲೀಸ್ ಮಾಡೋ ಪ್ಲಾನ್ ನಲ್ಲಿದೆ ಚಿತ್ರತಂಡ.. ಚಿತ್ರದ ಫಸ್ಟ್ ಲುಕ್ ಅಷ್ಟೊಂದು ಕ್ಯೂರಿಯಾಸಿಟಿಯನ್ನ ಬಿಲ್ಡ್ ಮಾಡಿತ್ತು, ಆದ್ರೀಗ ಟೀಸರ್ ಅಂದ್ರೆ ಅದೆಷ್ಟು ಕುತೂಹಲವನ್ನ ಕೆರಳಿಸುತ್ತೋ ವೇಟ್ ಮಾಡೇ ನೋಡ್ಬೇಕು.
ಇನ್ನು ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ ನಿರ್ಮಾಪಕ ಸಿ.ಆರ್.ಮನೋಹರ್.. ರೋಗ್ ಚಿತ್ರದ ನಂತರ ವಿಲನ್ ಸಿನಿಮಾಗೆ ಬಂಡವಾಳ ಹೂಡಿರೋ ನಿರ್ಮಾಪಕ ಸಿನಿಮಾದ ಸೆಟ್ಗಳಲ್ಲಿ ಆಗಾಗ ಕಾಣಿಸಿಕೊಂಡಿದ್ಧಾರೆ. ಇನ್ನು ಈ ಚಿತ್ರದಲ್ಲಿ ನಾಯಕಿಯಾಗಿ ಇದೇ ಫಸ್ಟ್ ಟೈಮ್ ಕನ್ನಡದಲ್ಲಿ ನಟಿಸ್ತಿದ್ದಾರೆ ಆಮಿ ಜಾಕ್ಸನ್. ಇದೇ ವಾರ ದಿ ವಿಲನ್ ಸಿನಿಮಾದ ಟೀಸರ್ ರಿಲೀಸ್ ಆಗಲಿದ್ದು, ಟೀಸರ್ ನೋಡುವ ನಿರೀಕ್ಷೆಯಲ್ಲಿ ಇಬ್ಬರು ಸ್ಟಾರ್ ನಟರ ಅಭಿಮಾನಿಗಳು ಕಾಯ್ತಿದ್ದಾರೆ. ತಮ್ಮ ನೆಚ್ಚಿನ ನಾಯಕನ ಎಂಟ್ರಿ ಹಾಗೂ ಸಿನಿಮಾದ ಆಕ್ಷನ್ ಬಗ್ಗೆ ಈಗಾಗ್ಲೇ ಕಲ್ಪನೆಗಳು ಗಾಂಧಿನಗರದಲ್ಲಿ ಶುರುವಾಗಿವೆ. ಚಿತ್ರದಲ್ಲಿ ಯಾರಿಗೆ ಯಾರು ವಿಲನ್..? ಯಾರಿಗೆ ಯಾರು ನಾಯಕರು ಅನ್ನೋದು ಮಾತ್ರ ಸಸ್ಪೆನ್ಸ್ ಆಗಿಯೇ ಉಳಿದಿದೆ. ಇನ್ನು ಕೇವಲ ಒಂದೇ ಟೀಸರ್ ರಿಲೀಸ್ ಆಗ್ತಿಲ್ಲ, ಶಿವಣ್ಣನ ಕುರಿತಾದ ಒಂದು ಟೀಸರ್ ಆದ್ರೆ, ಸುದೀಪ್ ಕುರಿತಾದ ಮತ್ತೊಂದು ಟೀಸರ್ ರಿಲೀಸ್ ಮಾಡೋ ಪ್ಲಾನ್ ಮಾಡಿದ್ದಾರೆ ನಿರ್ದೇಶಕ ಪ್ರೇಮ್.
Comments