'ಬಿಗ್ ಬಾಸ್' ಮನೆಯಲ್ಲಿ ಮತ್ತೊಂದು ಬೆಳವಣಿಗೆ

ಜಗನ್ ಕ್ಯಾಪ್ಟನ್ ಆಗಿ ಆಯ್ಕೆಯಾದ ಹಿನ್ನಲೆಯಲ್ಲಿ ಅವರ ತಾಯಿ ಮಾತನಾಡಿದ್ದಾರೆ. ತಾಯಿಯ ಆಡಿಯೋ ಸಂಭಾಷಣೆ ಕೇಳಿದ ಜಗನ್ ಭಾವುಕರಾಗಿದ್ದಾರೆ. ಕೋಪ ಕಡಿಮೆ ಮಾಡಿಕೊ. ಎಲ್ಲರೊಂದಿಗೆ ವಿಶ್ವಾಸದಿಂದ ಇರು. ತುಂಬಾ ಚೆನ್ನಾಗಿ ಆಡುತ್ತಿದ್ದಿಯಾ, ಚೆನ್ನಾಗಿರು ಎಂದು ಅವರ ತಾಯಿ ಸಲಹೆ ನೀಡಿದ್ದಾರೆ. ನಂತರದಲ್ಲಿ ಮನೆಯೊಳಗೆ ಎಂಟ್ರಿ ಕೊಟ್ಟಿದ್ದೆ ಅಕುಲ್ ಬಾಲಾಜಿ. ಮನೆಯೊಳಗೆ ಬರುತ್ತಲೇ ಎಲ್ಲರೊಂದಿಗೆ ಖುಷಿಯಾಗಿ ಬೆರೆತು ಮಾತನಾಡಿದ ಅವರು ಉಲ್ಲಾಸ ತಂದಿದ್ದಾರೆ.
ಮನೆಯ ಸದಸ್ಯರಿಗೆ 'ಅಕುಲ್ ಕಮಾಲ್' ವಿಶೇಷ ಚಟುವಟಿಕೆಯೊಂದನ್ನು ನೀಡಲಾಗಿದ್ದು, ಅಕುಲ್ ಬಾಲಾಜಿಗೆ ಮಂತ್ರದಂಡವನ್ನು ಕೊಡಲಾಗಿದೆ. ಅವರು ಮಂತ್ರ ದಂಡ ಪ್ರಯೋಗಿಸಿದ ಸದಸ್ಯರು ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು. ಒಬ್ಬ ಸದಸ್ಯ ಪಾಲಿಸದಿದ್ದರೂ, ಎಲ್ಲಾ ಸದಸ್ಯರು ನೀರಿನಲ್ಲಿ ಮುಳುಗಿ ಏಳಬೇಕಿತ್ತು. ಅದರಂತೆ ಅಕುಲ್ ಹೇಳಿದ ಮಾತುಗಳನ್ನು ಮೀರಿದ ಕಾರಣಕ್ಕೆ ಸದಸ್ಯರು ಹಲವು ಸಲ ನೀರಿನಲ್ಲಿ ಮುಳುಗಿದ್ದಾರೆ. ಅಕುಲ್ ಅವರಂತೂ ಸದಸ್ಯರನ್ನು ಕಾಡಿದ್ದು ತಮಾಷೆಯಾಗಿತ್ತು. ಜಯಶ್ರೀನಿವಾಸನ್ ರಜನಿಕಾಂತ್ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದು, ರಿಯಾಜ್ ಗೆ ಸೀಕ್ರೆಟ್ ಟಾಸ್ಕ್ ನೀಡಲಾಗಿತ್ತು. ಚಂದನ್ ಗೆ ಹುಡುಗಿಯರಿಗೆ ಪ್ರಪೋಸ್ ಮಾಡಲು ತಿಳಿಸಲಾಗಿತ್ತು. ಶ್ರುತಿ ಹುಡುಗರೊಂದಿಗೆ ಜಗಳ ಮಾಡಿದ್ದು ತಮಾಷೆಯಾಗಿತ್ತು. ಹೀಗೆ ಅಕುಲ್ ಬಾಲಾಜಿ ಹೇಳಿದಂತೆ ಹಲವು ಸದಸ್ಯರು ಮಾಡಿದ್ದು, ಕೆಲ ಸದಸ್ಯರ ಆಟ ತಮಾಷೆಯಾಗಿತ್ತು. ಇನ್ನು 'ಸೂಪರ್ ಟಾಕ್ ಟೈಮ್'ನಲ್ಲಿ ಅಕುಲ್ ಬಾಲಾಜಿ ಕೇಳಿದ ವಿವಿಧ ಪ್ರಶ್ನೆಗಳಿಗೆ ಸದಸ್ಯರು ಉತ್ತರಗಳನ್ನು ನೀಡಿದ್ದು, ಕೆಲವರು ನೀಡಿದ್ದ ಉತ್ತರಗಳಂತೂ ಸಖತ್ ತಮಾಷೆಯಾಗಿತ್ತು. ತಾನು ಮಾತುಕತೆ ನಡೆಸಿದ ಸದಸ್ಯರಲ್ಲಿ ಅಕುಲ್ ಅವರು ಉತ್ತಮ ಉತ್ತರ ನೀಡಿದ್ದಕ್ಕಾಗಿ ಚಂದನ್, ನಿವೇದಿತಾ ಅವರನ್ನು ಆಯ್ಕೆ ಮಾಡಿದ್ದಾರೆ.
Comments