'ಬಿಗ್ ಬಾಸ್'ಗೆ ಬಂದ ಮತ್ತೊಬ್ಬ ನಟಿ
ಹಿಂದಿನ ಸೀಸನ್ ವಿಜೇತ ಪ್ರಥಮ್ ನಟಿಸಿರುವ 'ದೇವ್ರಂತ ಮನುಷ್ಯ' ಚಿತ್ರದ ನಟಿ ವೈಷ್ಣವಿ 'ಬಿಗ್ ಬಾಸ್' ಮನೆಯೊಳಗೆ ಬಂದಿದ್ದಾರೆ. ಅವರು ಮನೆಯೊಳಗೆ ಬಂದ ಸಂದರ್ಭದಲ್ಲಿ ಸದಸ್ಯರಿಗೆಲ್ಲಾ ಅಚ್ಚರಿಯಾಗಿದೆ. 50 ದಿನಗಳ ಬಳಿಕ ಬಂದಿದ್ದಾರೆ.
ಈ ರೀತಿ ಬರುವುದು ಅದೃಷ್ಟ ಎಂದು ಚಂದನ್, ರಿಯಾಜ್ ಬಳಿ ಹೇಳಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ ರಿಯಾಜ್, ಜನ ನಮ್ಮ ಬಗ್ಗೆ ಇಷ್ಟು ದಿನಗಳ ಕಾಲ ತಿಳಿದಿರುತ್ತಾರೆ. ಅವರ ಬಗ್ಗೆ ಗೊತ್ತಿರಲ್ಲ ಎಂದು ತಿಳಿಸಿದ್ದಾರೆ. ವೈಷ್ಣವಿ ಅವರು ಮನೆಗೆ ಬಂದ ಸಂದರ್ಭದಲ್ಲಿ ಯಾರ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ಜಗನ್ ತೋರಿಸಿದ್ದಾರೆ. ಇನ್ನು ಮನೆಯ ಸದಸ್ಯರಿಗೆ ಮನರಂಜನೆಗಾಗಿ 'ರಾಜ ನನ್ನ ರಾಜ' ವಿಶೇಷ ಚಟುವಟಿಕೆ ನೀಡಲಾಗಿದ್ದು, ಇದರಲ್ಲಿ ಸದಸ್ಯರೇ ತಮ್ಮ ಕಾಲ್ಪನಿಕ ಪಾತ್ರಗಳನ್ನು ನಿರ್ವಹಿಸಬೇಕಿತ್ತು. ಎಲ್ಲಾ ಸದಸ್ಯರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅದರಲ್ಲಿ ಚಂದನ್ ಅವರು ಉತ್ತಮವಾಗಿ ನಿರ್ವಹಿಸಿದ್ದಾರೆ ಎಂದು ಕ್ಯಾಪ್ಟನ್ ಜಗನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Comments