ಟಾಲಿವುಡ್ ನತ್ತ ಮುಖ ಮಾಡಿದ 'ಸನ್ನಿ ಲಿಯೋನ್ '

ಸನ್ನಿ ತೆಲುಗು ಚಿತ್ರವೊಂದಕ್ಕೆ ಈಗಾಗಲೇ ಸಹಿ ಮಾಡಿದ್ದಾಳೆ. ಚಿತ್ರದ ಬಗ್ಗೆ ಮಾತನಾಡಿದ ಸನ್ನಿ ಈ ಚಿತ್ರ ನನ್ನ ಇಮೇಜ್ ಬದಲಿಸುತ್ತೆ ಎಂಬ ನಂಬಿಕೆಯಿದೆ. ವರ್ಷಗಳಿಂದ ನಾನು ಆಕ್ಷನ್ ಫಿಲ್ಮ್ ಬಗ್ಗೆ ಆಸಕ್ತಿ ಹೊಂದಿದ್ದೆ. ಈಗ ಸ್ಕ್ರಿಪ್ಟ್ ಸಿಕ್ಕಿದೆ ಎಂದು ಸನ್ನಿ ಹೇಳಿದ್ದಾಳೆ.
ತೆಲುಗು ಚಿತ್ರ ಕಥೆ ಕೇಳ್ತಿದ್ದಂತೆ ನಾನು ಓಕೆ ಎಂದಿದ್ದೇನೆ. ಚಿತ್ರಕ್ಕಾಗಿ ತಯಾರಿ ಶುರುಮಾಡಿದ್ದೇನೆ. ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದಲ್ಲಿ ನನ್ನ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ. ಈ ಚಿತ್ರದಲ್ಲಿ ನಟಿಸಲು ಉತ್ಸಾಹಿತಳಾಗಿದ್ದೇನೆಂದು ಸನ್ನಿ ಹೇಳಿದ್ದಾಳೆ. ವಯಸ್ಕರ ಚಿತ್ರ ಜಗತ್ತಿನಿಂದ ಬಾಲಿವುಡ್ ಪ್ರವೇಶ ಮಾಡಿದ್ದ ಸನ್ನಿ ಲಿಯೋನ್ ತನ್ನ ಇಮೇಜ್ ಬದಲಿಸುವ ಪ್ರಯತ್ನದಲ್ಲಿದ್ದಳು. ಆದ್ರೆ ಸನ್ನಿಗೆ ಇದು ಸಾಧ್ಯವಾಗಲಿಲ್ಲ. ಸನ್ನಿ ಕೈ ಸೇರಿದ್ದು ಜಿಸ್ಮ್, ರಾಗಿಣಿ ಎಂಎಂಎಸ್ 2 ಹೀಗೆ ಹಾಟ್ ದೃಶ್ಯಗಳಲ್ಲಿ ಕಾಣಿಸುವ ಚಿತ್ರಗಳು. ಕಡಿಮೆ ಬಟ್ಟೆ ತೊಟ್ಟು ಮೈಮಾಟ ಪ್ರದರ್ಶಿಸುವ ಪಾತ್ರಗಳಿಂದ ಬೇಸತ್ತಿರುವ ಸನ್ನಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾಳೆ.
Comments