ಹೊಸ ದಾಖಲೆ ಬರೆದ ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ

ಒಂದೇ ಕುಟುಂಬದ ಮೂವರು ನಾಯಕರಿಗೆ ತಾನು ನಾಯಕಿಯಾಗಿ ಅಭಿನಯಿಸುವ ಮುಖೇನ ಹರಿಪ್ರಿಯಾ ಈ ಹಿಂದೆ ಯಾವ ಕನ್ನಡ ನಾಯಕಿಯರೂ ಮಾಡದ ಸಾಧನೆ ಮಾಡಿದ್ದಾರೆ. ಸರ್ಜಾ ಕುಟುಂಬದ ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ ಅವರ ಜತೆ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹರಿಪ್ರಿಯಾ ಹೊಸ ಉತ್ಸಾಹದಲ್ಲಿದ್ದಾರೆ.
ಕನ್ನಡದ ಬಹುಕೋಟಿ ಬಜೆಟ್ ಚಿತ್ರ 'ಕುರುಕ್ಷೇತ್ರ' ದಲ್ಲಿ ಅರ್ಜುನ್ ಸರ್ಜಾಗೆ ನಾಯಕಿಯಾಗಿ ಅಭಿನಯಿಸುತ್ತಿರುವ ನಟಿ ಈ ಹಿಂದೆ ಧ್ರುವ ಸರ್ಜಾ ಜೊತೆಯಲ್ಲಿ 'ಭರ್ಜರಿ' ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಇದೇ ವೇಳ ಚಿರಂಜೀವಿ ಸರ್ಜಾ ಅಭಿನಯದ 'ಸಂಹಾರ' ಕ್ಕೆ ಸಹ ಹರಿಪ್ರಿಯಾ ನಾಯಕಿಯಾಗಿರುವುದು ವಿಶೇಷ. ಸದ್ಯ ಹರಿಪ್ರಿಯ ಕುರುಕ್ಷೇತ್ರ, ಸಂಹಾರ, ಸೂಜಿದಾರ, ಲೈಫ್ ಜೊತೆ ಒಂದ್ ಸೆಲ್ಫಿ ನಂತಹಾ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದು, ಇದರೊಡನೆ ತೆಲುಗು ಚಿತ್ರರಂಗದ ಖ್ಯಾತ ನಟ 'ಬಾಲಯ್ಯ' ಅಭಿನಯದ ಚಿತ್ರದಲ್ಲಿ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಒಟ್ಟಾರೆ ಕನ್ನಡ ನಟಿಯೊಬ್ಬರು ಇಂತಹ ಅಪರೂಪದ ಸಾಧನೆ ಮಾಡಿರುವುದು ಕನ್ನಡ ಚಿತ್ರಾಭಿಮಾನಿಗಳಿಗೆ ಅತ್ಯಂತ ಖುಷಿಯ ಸಂಗತಿ.
Comments