ಬಾಲಿವುಡ್ ನಲ್ಲಿ ಕಿಚ್ಚ ಸುದೀಪ್ ನಟಿಸ್ತಿದಾರಂತೆ, ಹಾಗಿದ್ರೆ ಆ ಸಿನಿಮಾ ಯಾವುದು ?

ಹೌದು, ಕಿಚ್ಚ ಸುದೀಪ್ ಅವರು ಕನ್ನಡದ 'ದಿ ವಿಲನ್' ಹಾಗೂ 'ಪೈಲ್ವಾನ್' ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರುವ 'ಸೈರಾ' ಚಿತ್ರದಲ್ಲಿ ಸಹ ಅಭಿನಯಿಸಲು ಆಫರ್ ಬಂದಿರುತ್ತದೆ. ಈ ಸಿನಿಮಾಗಳ ಜೊತೆಗೆ ಹಾಲಿವುಡ್ ನ 'ರೈಸನ್' ಸಿನಿಮಾದಲ್ಲಿ ಸಹ ಅಭಿನಯಿಸಲಿದ್ದಾರೆ.
ಕಿಚ್ಚ ಸುದೀಪ್ ಈಗ ಮತ್ತೆ ಹಿಂದಿ ಸಿನಿಮಾದಲ್ಲಿ ನಟಿಸುವಂತೆ ಆಫರ್ ಕೂಡ ಬಂದಿದೆ. ಅದರಲ್ಲೂ ರಣವೀರ್ ಸಿಂಗ್ ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ವಿಶೇಷ. ಅಂದಹಾಗೆ ಆ ಸಿನಿಮಾ ಯಾವುದು ಗೊತ್ತಾ..? ಈ ಎಲ್ಲ ಸಿನಿಮಾಗಳ ನಡುವೆ ಹಿಂದಿಯ ರಣವೀರ್ ಸಿಂಗ್ ಅವರ ಮುಂದಿನ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಅಭಿನಯಿಸುವಂತೆ ಕಿಚ್ಚ ಸುದೀಪ್ ಅವರನ್ನು ಕೇಳಲಾಗಿದೆಯಂತೆ. ಒಟ್ಟಿನಲ್ಲಿ ಕಿಚ್ಚ ಸುದೀಪ್ ಅವರು ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಲು ಮುಂದಾಗಿದ್ದಾರೆ.
Comments