ಬಿಗ್ ಬಾಸ್ ವೇದಿಕೆಯಲ್ಲಿ ಪ್ರಥಮ್ ಕಿರಿಕ್
ಪ್ರಥಮ್ ಮಾತನಾಡಿ, ದಿವಾಕರ್ ಅವರು ಹಿಂದಿನ ಸ್ಪರ್ಧಿಯನ್ನು ಅನುಕರಿಸುವಂತಿದೆ ಎಂದು ಪರೋಕ್ಷವಾಗಿ ತಮ್ಮನ್ನು ದಿವಾಕರ್ ಅನುಸರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಆಕ್ಷೇಪಿಸಿದ ಸುದೀಪ್, ಮನೆಯಲ್ಲಿನ ಸ್ಪರ್ಧಿ ದಿವಾಕರ್ ಬಗ್ಗೆ ಹಾಗೆಲ್ಲಾ ಹೇಳಬೇಡಿ. ಎಲ್ಲರಿಗೂ ಅವರದೇ ಆದ ವ್ಯಕ್ತಿತ್ವವಿದ್ದು, ಅದೇ ರೀತಿಯಲ್ಲಿ ಆಡುತ್ತಿದ್ದಾರೆ. ಅವರನ್ನು ಅವಮಾನ ಮಾಡಬೇಡಿ. ನನ್ನ ವೇದಿಕೆಯಲ್ಲಿ ಸದಸ್ಯರಿಗೆ ಅವಮಾನ ಆಗಲು ಬಿಡಲ್ಲ.
ಅವರ ಸ್ಥಾನದಲ್ಲಿ ನೀವಿದ್ದರೂ, ಅವಮಾನ ಆಗಲು ಬಿಡಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. 'ಬಿಗ್ ಬಾಸ್ ಸೀಸನ್ 5' 50 ನೇ ದಿನ ಪೂರೈಸಿದೆ. ಸಂಭ್ರಮಾಚರಣೆಯಲ್ಲಿ ಹಿಂದಿನ ಸೀಸನ್ ಗಳಲ್ಲಿ ವಿಜೇತರಾಗಿದ್ದ ಅಕುಲ್ ಬಾಲಾಜಿ, ಶ್ರುತಿ ಮತ್ತು ಪ್ರಥಮ್ ಅವರು ಆಗಮಿಸಿದ್ದು, ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮೊದಲ ಸೀಸನ್ ವಿಜೇತರಾಗಿದ್ದ ವಿಜಯ್ ರಾಘವೇಂದ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಅವರನ್ನು ಸುದೀಪ್ ಹಲವಾರು ಸಲ ನೆನಪಿಸಿದ್ದಾರೆ. ಸಂಭ್ರಮಾಚರಣೆಯಲ್ಲಿ ಅತಿಥಿಗಳಾಗಿದ್ದ ಪ್ರಥಮ್ ಮತ್ತು ಅಕುಲ್ ನಡುವೆ ನಡೆದ ಮಾತುಗಳು ಹಾಸ್ಯಮಯವಾಗಿದ್ದವು. ಸುದೀಪ್ ಅವರಂತೂ ಒಂದು ಹಂತದಲ್ಲಿ ನಗು ತಡೆಯದೇ, ನೀವೇ ಮಾತನಾಡಿ, ನಾವು ಹೋಗ್ತೇವೆ ಎಂದು ಶ್ರುತಿ ಅವರನ್ನು ಕರೆದುಕೊಂಡು ಹೊರಟಿದ್ದರು. ಈ ವೇಳೆ ಅತಿಥಿಗಳು, ಕಾಮನ್ ಮ್ಯಾನ್, ಸೆಲೆಬ್ರಿಟಿಗಳು ಎಲ್ಲರೂ ಒಂದೇ ಎಂದು ಹೇಳಿದ್ದು, ಸೀಸನ್ 5 ರಲ್ಲಿ ಯಾರೆಲ್ಲಾ ಗೆಲ್ಲಬಹುದು ಎಂದು ಹಲವರ ಹೆಸರುಗಳನ್ನು ತಿಳಿಸಿದ್ದಾರೆ.
Comments