ಎಲ್ ಕೆ .ಅಡ್ವಾಣಿ ಅವರನ್ನು ಪ್ರಥಮ್ ಭೇಟಿ ಮಾಡಿರುವುದೇಕೆ ?

ಪ್ರಥಮ್ ರಾಜಕೀಯಕ್ಕೆ ಬರುವ ಬಗ್ಗೆ ಕೆಲ ದಿನದ ಹಿಂದೆ ತಾನೇ ಹೇಳಿದ್ದರು. ಆದರೆ ಇದು ಯಾವುದೇ ರಾಜಕೀಯಕ್ಕೆ ಸಂಭಂದಿಸಿದ ಬೇಟಿ ಆಗಿಲ್ಲ. ನಿನ್ನೆ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಏರ್ಪಡಿಸಿದ್ದ ಹನುಮಾನ್ ತ್ರೀ ಡಿ ಪ್ರೊಜೆಕ್ಷನ್ ಮ್ಯಾಪಿಂಗ್ ಗೆ ಅಡ್ವಾಣಿ ಚಾಲನೆ ನೀಡಿದರು. ಈ ವೇಳೆ ಪ್ರಥಮ್ ಅಡ್ವಾಣಿ ಅವರನ್ನು ಬೇಟಿ ಮಾಡಿದ್ದಾರೆ.
ವಿಶೇಷ ಅಂದರೆ ಇದೇ ಸಮಯದಲ್ಲಿ ಪ್ರಥಮ್ ಹೊಸ ಚಿತ್ರ 'ಬಿಲ್ಡಪ್' ಸಿನಿಮಾಗೆ ಅಡ್ವಾಣಿ ಕ್ಲಾಪ್ ಮಾಡಿದ್ದಾರೆ. ಇನ್ನು ''ನನ್ನ ಜೀವನದಲ್ಲಿ ನಾನ್ ಸಾಯೋದ್ರೊಳಗೆ ಒಮ್ಮೆ ಇವರನ್ನ ನೋಡ್ಬೇಕು ಅನ್ಕೊಂಡಿದ್ದೆ! ನನ್ನ ಸಿನಿಮಾದ ಕ್ಲಾಪ್ ಬೋರ್ಡ್ ಇವರಿಗೆ ಕೊಟ್ಟು ಆಶೀರ್ವಾದ ತಗೊಂಡು ಬಂದೆ.'' ಎಂದು ಪ್ರಥಮ್ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
Comments