15 ವರ್ಷಗಳ ನಂತರ ರಿಮೇಕ್ ಚಿತ್ರದಲ್ಲಿ ಶಿವಣ್ಣ

15 ವರ್ಷ ಗಳ ನಂತರ ರೀಮೇಕ್ ಚಿತ್ರವೊಂದರಲ್ಲಿ ನಟ ಶಿವರಾಜಕುಮಾರ್ ನಟಿಸುತ್ತಿದ್ದು, ಈ ಈ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನೆರವೇರಿತು.
ಮಲೆಯಾಳಂನ ಒಪ್ಪಂ ಚಿತ್ರದ ರೀಮೇಕ್ ಕವಚ ಸಿನಿಮಾದಲ್ಲಿ ಶಿವಣ್ಣ ನಟಿಸುತ್ತಿದ್ದು, ಚಿತ್ರದಲ್ಲಿ ಶಿವರಾಜ್‍ಕುಮಾರ್ ಒಬ್ಬ ಅಂಧನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಮಲಯಾಳಂನ ಮೋಹನ್‍ಲಾಲ್ ಮಾಡಿದ್ದ ಕುರುಡನ ಪಾತ್ರವನ್ನು ಕನ್ನಡದಲ್ಲಿ ಡಾ. ಶಿವರಾಜ್ ಕುಮಾರ್ ಅವರು ನಿರ್ವಹಿಸಿದ್ದಾರೆ. ಜಿ.ವಿ.ಆರ್. ವಾಸು ಈ ಚಿತ್ರಕ್ಕೆ ಆಯಕ್ಷನ್ -ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ಶಿವರಾಜ್‍ಕುಮಾರ್ ಅವರ ಜೊತೆ ಕೃತಿಕಾ ಹಾಗೂ ಇಶಾ ಕೊಪ್ಪಿಕರ್ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಉಳಿದಂತೆ ಸಿನಿಮಾದಲ್ಲಿ ರವಿಕಾಳೆ, ತಬಲಾ ನಾಣಿ, ವಸಿಷ್ಠ ಸಿಂಹ, ಲಯೇಂದ್ರ ಮುಂತಾದ ಕಲಾವಿದರು ನಟಿಸುತ್ತಿದ್ದಾರೆ. ರಾಹುಲ್ ಶ್ರೀ ವಾತ್ಸವ್ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡು ತ್ತಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ನಟ ವಸಿಷ್ಟ ಸಿಂಹ ಈ ಚಿತ್ರದಲ್ಲಿ ಖಳನಾಯಕನಾಗಿ ತನ್ನ ಖದರ್ ತೋರಿಸಲಿದ್ದಾರೆ.
Comments