ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗೋದು ಯಾರು ?

ಈ ವಾರ ಮನೆಯಲ್ಲಿ 6 ಮಂದಿ ನಾಮಿನೇಟ್ ಆಗಿದ್ದಾರೆ. ಚಂದ್ರು, ದಿವಾಕರ್, ಜಯಶ್ರೀನಿವಾಸನ್, ಕೃಷಿ, ರಿಯಾಜ್, ಸಮೀರಾಚಾರ್ಯ ನಾಮಿನೇಟ್ ಆಗಿದ್ದು, ಯಾರು ಮನೆಯಿಂದ ಹೊರ ಹೋಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಈ ವಾರ ಸದಸ್ಯರೆಲ್ಲರೂ ಉತ್ತಮವಾಗಿ ಪ್ರದರ್ಶನ ನೀಡಿದ್ದಾರೆ ಎಂದು 'ಬಿಗ್ ಬಾಸ್' ಶ್ಲಾಘಿಸಿದ್ದಾರೆ. ದಿವಾಕರ್ ಅವರು ಕಳ್ಳನಾಗಿ ಕದಿಯುವಲ್ಲಿ ಯಶಸ್ವಿಯಾದರೂ, ಅದನ್ನು ಬಚ್ಚಿಟ್ಟು ರಕ್ಷಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಅಧಿಕಾರಿಯಾಗಿ ರಿಯಾಜ್, ಬಚ್ಚಿಟ್ಟಿದ್ದ ವಸ್ತುಗಳನ್ನು ಪತ್ತೆ ಮಾಡಿದ್ದಾರೆ. ದಿನದ ಕೊನೆಯಲ್ಲಿ ಸದಸ್ಯರು ತಮ್ಮ ಬಳಿ ಇರುವ ಒಟ್ಟು ಮೊತ್ತದ ಬಗ್ಗೆ ತಿಳಿಸಿದ್ದು, ಅದರಲ್ಲಿ ನಿವೇದಿತಾ ಬಳಿ ಹಣ ಇರಲಿಲ್ಲ. ದಿವಾಕರ್ 600 ರೂ. ಸಾಲ ಮಾಡಿದ್ದರೆ, ಆಶಿತಾ 140 ರೂ. ಸಾಲ ಪಡೆದುಕೊಂಡಿದ್ದಾರೆ. ಜಗನ್ ಬಳಿ 2730 ರೂ. ಉಳಿದಿದೆ. ಸೀಕ್ರೆಟ್ ಟಾಸ್ಕ್ ನಿರ್ವಹಿಸುವಲ್ಲಿ ವಿಫಲವಾದ ಸದಸ್ಯರು ಪಾಯಿಂಟ್ ಕಳೆದುಕೊಂಡಿದ್ದಾರೆ. ಇನ್ನು ಸದಸ್ಯರಿಗೆ ತಾವು ಬಳಸಿದ, ನೆನಪಿನ, ಬಾಂಧವ್ಯದ ವಸ್ತುಗಳನ್ನು ಮನೆಯಿಂದ ತರಿಸಿಕೊಡಲಾಗಿದ್ದು, ಇದನ್ನು ಕಂಡ ಸದಸ್ಯರು ಭಾವುಕರಾಗಿ ಆ ವಸ್ತುಗಳ ಜೊತೆಗಿನ ತಮ್ಮ ಒಡನಾಟ, ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ. ಶ್ರುತಿಗೆ ಏನೂ ಬಂದಿಲ್ಲವೆಂದು ಬೇಜಾರಾಗಿದ್ದಾರೆ. ಇನ್ನು ಕ್ಯಾಪ್ಟನ್ ಆಗಿದ್ದ ಕಾರ್ತಿಕ್, ಈ ವಾರ ಜಯಶ್ರೀನಿವಾಸನ್ ಅವರಿಗೆ ಬೆಸ್ಟ್ ಪರ್ ಫಾರ್ಮರ್ ಎಂದು ಆಯ್ಕೆ ಮಾಡಿದ್ದಾರೆ. ನಿವೇದಿತಾಗೆ ಕಳಪೆ ಬೋರ್ಡ್ ಹಾಕಿದ್ದಾರೆ.
Comments