ಬಹು ನಿರೀಕ್ಷಿತ 'ಮಫ್ತಿ' ಚಿತ್ರ ಇಂದು ರಾಜ್ಯದಾದ್ಯಂತ ತೆರೆಗೆ

'ಮಫ್ತಿ' ಚಿತ್ರವನ್ನು ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸಿದ್ದಾರೆ. ನರ್ತನ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಶಿವರಾಜಕುಮಾರ್, ಶ್ರೀಮುರಳಿ, ಸಾನ್ವಿ ಶ್ರೀವಾಸ್ತವ್, ದೇವರಾಜ್, ಛಾಯಾಸಿಂಗ್, ಪ್ರಕಾಶ್ ಬೆಳವಾಡಿ, ವಸಿಷ್ಠಸಿಂಹ, ಸಾಧುಕೋಕಿಲ, ಚಿಕ್ಕಣ್ಣ, ಮಧುಗುರುಸ್ವಾಮಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ರವಿವರ್ಮ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಸಾಯಿಸರ್ವೇಶ್, ಕೆ.ಕಲ್ಯಾಣ್ ಹಾಗೂ ನರ್ತನ್ ರಚಿಸಿದ್ದಾರೆ. ಕೆ.ಶ್ರೀರಾಂಲಕ್ಷ್ಮಣ್ ಅವರು ಚಿತ್ರಕ್ಕೆ ಸಂಭಾಷಣೆ ಬರೆಯುವುದರೊಂದಿಗೆ ಸಹಕಾರ ನಿರ್ದೇಶನವನ್ನು ಮಾಡಿದ್ದಾರೆ.
Comments