ರಿಯಾಜ್ ಗೆ ಬಿಗ್ ಬಾಸ್ ಮನೆಯಲ್ಲಿ ಹಿಂಸೆಯಾಗುತ್ತಿದೆಯಂತೆ

'ಬಿಗ್ ಬಾಸ್' ಮನೆಯಲ್ಲಿರುವ ರಿಯಾಜ್ ಮೇಲೆ ಚಂದನ್ ಹಾಗೂ ದಿವಾಕರ್ ಮುನಿಸಿಕೊಂಡಿದ್ದಾರೆ. ರಿಯಾಜ್ ಕೂಡ ಇದಕ್ಕೆ ಹೊರತಾಗಿಲ್ಲ. ಮೊದಲಿದ್ದಂತಹ ಆತ್ಮೀಯತೆ, ಸ್ನೇಹ ಮಾಯವಾಗಿದೆ. ಬೇರೆಯವರ ಮುಂದೆ ದಿವಾಕರ್ ಹಾಗೂ ಚಂದನ್ ಅವರ ವಿರುದ್ಧ ಮಾತನಾಡುತ್ತಿದ್ದಾರೆ ರಿಯಾಜ್. ನಿನ್ನೆಯು ಕೂಡ ಜಗನ್ ಹಾಗೂ ಜಯ ಶ್ರೀನಿವಾಸನ್ ಬಳಿ ಚಂದನ್-ದಿವಾಕರ್ ಕುರಿತು ಕೆಟ್ಟದ್ದಾಗಿ ಮಾತನಾಡಿದ್ರು ರಿಯಾಜ್.
''ದಿವಾಕರ್ ಹಾಗೂ ಚಂದನ್ ಅವರಿಂದ ಹಿಂಸೆಯಾಗುತ್ತಿದೆ. ಈ ಮನೆಯಿಂದ ಹೊರಗೆ ಹೋಗಬೇಕು ಎನ್ನುವ ಭಾವನೆ ಮೂಡುತ್ತಿದೆ. ಅವರಿಬ್ಬರು ಮೊದಲು ಚೆನ್ನಾಗಿದ್ದರು, ಆದರೆ, ಎರಡು ದಿನಗಳಿಂದ ಮಾತನಾಡುತ್ತಿಲ್ಲ. ಇದನ್ನೆಲ್ಲ ನೋಡಿ ಬೇಸರವಾಗುತ್ತಿದೆ. ಮನೆಯಿಂದ ಹೊರಗೆ ಹೋದ್ರೆ ಈ ಚಿಂತೆ ಇರುವುದಿಲ್ಲ'' ಎಂದು ಭಾರವಾದ ಮನಸ್ಸಿನಿಂದ ಹೇಳಿದ್ರು ರಿಯಾಜ್.
Comments