ಧ್ರುವ ಸರ್ಜಾ 'ಪೊಗರು' ಚಿತ್ರಕ್ಕಾಗಿ ತೂಕ ಇಳಿಸಿಕೊಂಡಿದ್ದರಂತೆ..!!

ಹೌದು, ನಂದ ಕಿಶೋರ್ ನಿರ್ದೇಶನದ 'ಪೊಗರು' ಚಿತ್ರದ ಪಾತ್ರಕ್ಕಾಗಿ 30 ಕೆಜಿ ತೂಕ ಇಳಿಸಿಕೊಳ್ಳಲು ನಿರ್ದೇಶಕರು ಸೂಚಿಸಿದ್ದು, ಅದಕ್ಕಾಗಿ ಧ್ರುವ ಸರ್ಜಾ ವರ್ಕೌಟ್ ಮಾಡಿ ಬರೋಬ್ಬರಿ 26 ಕೆಜಿ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ.
ಪೊಗರು ಸಿನಿಮಾದ ಫಸ್ಟ ಆಫ್ ನಲ್ಲಿ ಧ್ರುವ 8 ನೇ ತರಗತಿ 12 ವರ್ಷದ ಬಾಲಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದ್ದರಿಂದ ಬಾಲಕನಂತೆ ಧ್ರುವ ಲುಕ್ ಬದಲಾಯಿಸಲು ನಿರ್ದೇಶಕ ನಂದಕಿಶೋರ್ ಮುಂದಾಗಿದ್ದಾರೆ. ಈಗಾಗಲೇ ಧ‍್ರುವ ಸರ್ಜಾ 26 ಕೆಜಿ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಧ‍್ರುವ ಸರ್ಜಾ ಕೆಲವೇ ದಿನಗಳಲ್ಲಿ ನಾಲ್ಕು ಕೆಜಿ ತೂಕ ಇಳಿಸಿಕೊಳ್ಳಲಿದ್ದಾರೆ . ನಂತರ ತೂಕ ಕಡಿಮೆಯಾದ ತಕ್ಷಣ ಚಿತ್ರೀಕರಣವನ್ನು ಪ್ರಾರಂಭ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.
Comments