ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರಾ ಶ್ರುತಿ ಹಾಸನ್



ತಮಿಳು ಚಿತ್ರ ನಟ ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್ ಬಹುದಿನಗಳಿಂದ ಲಂಡನ್ ಮೂಲದ ನಟ ಮೈಕಲ್ ಕೊರ್ಸೆಲ್ ಜೊತೆ ಡೇಟಿಂಗ್ ನಲ್ಲಿರುವ ಕುರಿತ ಗಾಸಿಪ್ ಹರಿದಾಡುತ್ತಿದೆ. ಶೃತಿ ಹಾಗೂ ಮೈಕಲ್ ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಇವರ ಪೋಸ್ಟ್ಗಳಿಂದ ಇಬ್ಬರೂ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಶುರುವಾಗಿತ್ತು.
ಆದ್ರೆ ಈವರೆಗೆ ಈ ವಿಷಯ ಖಚಿತವಾಗಿಲ್ಲ.ಈ ಜೋಡಿಯ ಮದುವೆಗೆ ಕಮಲ್ ಹಾಸನ್ ಮತ್ತು ಸಾರಿಕಾ ಕೂಡಾ ಒಪ್ಪಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ. ಎಲ್ಲಾ ಅಂದುಕೊಂಡಂತೆ ಆದರೆ ಐಶ್ವರ್ಯ ರೈ, ಕರೀನಾ ಕಪೂರ್, ಕಾಜೋಲ್, ಸಮಂತಾರಂತೆ ಸ್ಟಾರ್ ಕಪಲ್‍ಗಳ ಸಾಲಿಗೆ ಶ್ರುತಿ ಹಾಸನ್ ಕೂಡಾ ಸೇರಲಿದ್ದಾರೆ.
Comments