ರಾಜೇಶ್ ಖನ್ನಾ ಚಿತ್ರದ ರಿಮೇಕ್ ನಲ್ಲಿ ರಾಣಾ ದಗ್ಗುಬಾಟಿ

ರಾಜೇಶ್ ಖನ್ನಾ ಚಿತ್ರದ ರಿಮೇಕ್ ನಲ್ಲಿ ರಾಣಾ ದಗ್ಗುಬಾಟಿ ಮುಂಬೈ: ದಕ್ಷಿಣ ಭಾರತದ ನಟ ರಾಣಾ ದಗ್ಗುಬಾಟಿ ಹಿಂದಿಯ ಖ್ಯಾತ ಚಲನಚಿತ್ರ ರಾಜೇಶ್ ಖನ್ನಾ ಅಭಿನಯದ 'ಹಾಥಿ ಮೇರೇ ಸಾಥಿ' ಚಿತ್ರದ ರಿಮೇಕ್ ನಲ್ಲಿ ಅಭಿನಯಿಸುತ್ತಿರುವುದು ಮೂಲಗಳಿಂದ ತಿಳಿದು ಬಂದಿದೆ.
'ಹಾಥಿ ಮೇರೆ ಸಾಥಿ' ಸಿನಿಮಾದ ರಿಮೇಕ್ ಪ್ರಮುಖವಾಗಿ ಹಿಂದಿ, ತೆಲಗು ಹಾಗೂ ತಮಿಳು ಚಿತ್ರದಲ್ಲಿ ರಿಮೇಕ್ ಗೊಳ್ಳಲಿದೆ. ಬಾಲಿವುಡ್ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 1971 ಬ್ಲಾಕ್ ಬಾಸ್ಟರ್ ಚಿತ್ರ ಎಂದು ಖ್ಯಾತಿ ಪಡೆದಿದ್ದ 'ಹಾಥಿ ಮೇರೇ ಸಾಥಿ' ಚಿತ್ರವು ಇನ್ನು ಮುಂದೆ ಮೂರು ಭಾಷೆಗಳಲ್ಲಿ ರಿಮೇಕ್ ಗೊಳ್ಳಲಿದೆ.
ಈ ಕುರಿತು ರಾಣಾ ದಗ್ಗುಬಾಟಿ ಚಿತ್ರದ ಎಕ್ಸೈಟ್ ಮೆಂಟ್ ನ್ನು ಹಂಚಿಕೊಂಡಿದ್ದು, ಚಿತ್ರದ ಕುರಿತು ಹೇಳಿಕೊಂಡಿದ್ದಾರೆ. ಇದುವರೆಗೂ ನಾನು ಮಾಡಿರದೇ ಚಿತ್ರ ಇದಾಗಿದ್ದು, ಈ ಹಿಂದೆ ಮಾಡಿರುವ ಚಿತ್ರಗಳಿಗಿಂತಲು ವಿಭಿನ್ನವಾದದ್ದು, ದೇಶದ ಎಲ್ಲಾ ಕಡೆಗಳಲ್ಲಿ ಪ್ರವಾಸ ಕೈಗೊಳ್ಳುವುದು ನನಗಿಷ್ಟವಾಗಿದೆ ಎಂದು ಹೇಳಿದ್ದಾರೆ. ನೈಜ ಆಧಾರಿತ ಕಥೆಗಳನ್ನೊಳಗೊಂಡಿರುವ ಚಿತ್ರ ಎನ್ನಲಾಗುತ್ತಿದೆ. ಅಲ್ಲದೇ ಚಿತ್ರ ನಿರ್ದೇಶಕರು ಪ್ರಾಕೃತಿಕ ಹಾಗೂ ಪ್ರಾಣಿಗಳ ಕುರಿತು ಆಸಕ್ತಿ ಹೊಂದಿದ್ದಾರೆ. ಆನೆ ಎಂಬ ವಿಷಯವು ನನ್ನ ಫೇವರಿಟ್ ಸಬ್ಜೆಕ್ಟ್ ಎಂದು ನಿರ್ದೇಶಕರು ಹೇಳಿದ್ದಾರೆ.
Comments