ಇಂದು 'ಪದ್ಮಾವತಿ' ಚಿತ್ರದ ಭವಿಷ್ಯ ನಿರ್ಧಾರ

ಸಂಸದ ಅನುರಾಗ್ ಠಾಕೂರ್, ಬಾಲಿವುಡ್ ನಟ ಮತ್ತು ಸಂಸದ ಪರೇಶ್ ರಾವಲ್ ಹಾಗೂ ಕಾಂಗ್ರೆಸ್ನ ಸಂಸದ ರಾಜ್ ಬಬ್ಬರ್ ಸಮಿತಿಯ ಸದಸ್ಯರಾಗಿದ್ದಾರೆ. 'ಪದ್ಮಾವತಿ' ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮತ್ತು ಸೆನ್ಸಾರ್ ಬೋರ್ಡ್ನ ಅಧ್ಯಕ್ಷ ಪ್ರಸೂನ್ ಜೋಷಿ ಸೇರಿದಂತೆ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಚಿತ್ರದ ಬಿಡುಗಡೆಗೆ ಹಲವು ರಾಜ್ಯಗಳು ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಬನ್ಸಾಲಿ ಸಂಸದೀಯ ಸಮಿತಿ ಮುಂದೆ ತಮ್ಮ ಅಭಿಪ್ರಾಯವನ್ನು ಮಂಡಿಸಲಿದ್ದಾರೆ. ಚಿತ್ರದಲ್ಲಿ ರಾಣಿ ಪದ್ಮಿನಿ ಕುರಿತು ಆಕ್ಷೇಪಾರ್ಹವಾಗಿ ಚಿತ್ರಿಸಲಾಗಿದೆ ಎಂದು ರಜಪೂತ ಸಮುದಾಯ ಆರೋಪಿಸಿದೆ. ಚಿತ್ರೀಕರಣ ಪ್ರಾರಂಭವಾದ ದಿನದಿಂದಲೂ ರಜಪೂತ ಸಮುದಾಯದವರು ಪ್ರತಿಭಟನೆ ನಡೆಸುತ್ತಿದ್ದಾರೆ. ಈಗ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ದೇಶಾದ್ಯಂತ ಪ್ರತಿಭಟನೆ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ನಿರ್ಮಾಪಕರು ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದಾರೆ. ಚಿತ್ರ ಬಿಡುಗಡೆಗೆ ನಿಷೇಧ ಹೇರುವಂತೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇತ್ತೀಚೆಗೆ ಮೂರನೇ ಬಾರಿಗೂ ತಳ್ಳಿಹಾಕಿತ್ತು.
Comments