ರಾಧಿಕ ಪಂಡಿತ್ ಗೆ ಡಬಲ್ ಧಮಾಕಾ
ಒಂದೊಡೆ ಯಶ್ ಮತ್ತು ರಾಧಿಕಾ ಡಿಸೆಂಬರ್ 10ರಂದು ತಮ್ಮ ಮದುವೆಯ ಮೊದಲ ವಾರ್ಷಿಕೋತ್ಸವವನ್ನು ಆಚರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮದುವೆಯಾದ ನಂತರ ಇದು ನನ್ನ ಮೊದಲ ಚಿತ್ರ ಎನ್ನುವ ರಾಧಿಕಾಗೆ ಒಂದು ವರ್ಷ ಕಳೆದು ಹೋಗಿದ್ದೇ ಗೊತ್ತಾಗುತ್ತಿಲ್ಲವಂತೆ.
ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ರಾಧಿಕಾ ಪಂಡಿತ್ ಮತ್ತು ನಿರೂಪ್ ಭಂಡಾರಿ ಅಭಿನಯದ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಚಿತ್ರದ ಮುಹೂರ್ತ ನಾಳೆ ನಡೆಯಲಿದೆ. ನನಗೆ ಮದುವೆಯಾಗಿ ಒಂದು ವರ್ಷವಾಗುತ್ತಿದೆ. ರೆ. ಇನ್ನೊಂದೆಡೆ ನಟ ನಿರೂಪ್ ಭಂಡಾರಿ ಹೊಸ ತಂಡದೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದಾರೆ. ರಾಜರಥ ಚಿತ್ರದ ಶೂಟಿಂಗ್ ವೇಳೆ ಗಾಯಗೊಂಡಿದ್ದ ನಿರೂಪ್ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.ಡಿಸೆಂಬರ್ 11ರಿಂದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದೇನೆ. ಆದರೆ ಒಂದು ತಿಂಗಳಿನಿಂದ ಚಿತ್ರಕ್ಕೆ ಸಿದ್ದತೆ ನಡೆಸಿಕೊಳ್ಳುತ್ತಿದ್ದೇನೆ. ಚಿತ್ರದ ಪಾತ್ರದ ಬಗ್ಗೆ ಚೆನ್ನಾಗಿ ಅರಿವಿಗೆ ಬಂದಿದೆ ಎನ್ನುತ್ತಾರೆ ನಿರೂಪ್ ಭಂಡಾರಿ.
Comments