ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಒಳ್ಳೆ ಹುಡ್ಗ ಪ್ರಥಮ್
ಹೌದು, ಪ್ರಥಮ್ ತಾವು ಪ್ರೀತಿಸಿದ ಹುಡುಗಿಯ ಜೊತೆಯಲ್ಲಿಯೇ ಮದುವೆಯಾಗುತ್ತಿರುವುದಾಗಿ ತಿಳಿಸಿದ್ದಾರೆ. ಮೈಸೂರು ಮೂಲದ ಸಾಫ್ಟ್‌ವೇರ್ ಹುಡುಗಿ ಹಾಗೂ ಪ್ರಥಮ್ ಪರಸ್ಪರ ಪ್ರೀತಿಸುತ್ತಿದ್ದರೆಂದು ತಿಳಿದುಬಂದಿದೆ. ಇದೀಗ ಇಬ್ಬರ ಕುಟುಂಬದ ಒಪ್ಪಿಗೆಯ ಮೇರೆಗೆ ಶೀಘ್ರದಲ್ಲಿ ಸಿಶ್ಚಿತಾರ್ಥ ಕೂಡ ನೆರವೇರಲಿದೆ ಎಂದು ಪ್ರಥಮ್ ತಿಳಿಸಿದ್ದಾರೆ.
ಸಂಕ್ರಾಂತಿ ಹಬ್ಬದ ನಂತರ ನಿಶ್ಚಿತಾರ್ಥ ನಡೆಯಲಿದೆ ಎಂದು ತಿಳಿಸಿರುವ ಪ್ರಥಮ್ ಹುಡುಗಿಯ ಹೆಸರು ಹಾಗೂ ಹಿನ್ನೆಲೆಯ ಬಗ್ಗೆ ಯಾವುದೇ ಮಾಹಿತಿ ತಿಳಿಸಿಲ್ಲ. ಆದರೆ ಮದುವೆ ಮಾತ್ರ ಇನ್ನೂ ಎರಡು ವರ್ಷಗಳ ನಂತರ ಎಂದು ನಿರ್ಧರಿಸುವುದಾಗಿ ತಿಳಿಸಿದ್ದಾರೆ.
Comments