ಅಭಿಮಾನಿಯ ನೋವಿಗೆ ಜಗ್ಗೇಶ್ ಸ್ಪಂದಿಸಿದ್ದು ಹೀಗೆ
ಜಗ್ಗೇಶ್ ಅವರು ಕಷ್ಟದ ನಡುವೆ ಸಾಧನೆ ಮಟ್ಟ ಏರಿದವರು. ವೃತ್ತಿ ಜೀವನದಲ್ಲಿ ಅಗಾಧ ಅನುಭವ ಹೊಂದಿರುವ ಅವರು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಸಾಮಾನ್ಯ ಜನರೊಂದಿಗೆ ಕಷ್ಟ ಸುಖ ಹಂಚಿಕೊಳ್ಳುತ್ತಿರುತ್ತಾರೆ. ಅಲ್ಲದೆ, ಅಭುಮಾನಿಗಳ ಪ್ರಶ್ನೆಗೆ ಉತ್ತರ ನೀಡುವ ಮೂಲಕ ಸಲಹೆಯನ್ನು ಕೂಡ ನೀಡುತ್ತಾರೆ.
ಹೀಗೆ ಅಭಿಮಾನಿಯೊಬ್ಬರು ಜಗ್ಗೇಶ್ ಅವರ ಬಳಿ ತಮ್ಮ ನೋವೊಂದನ್ನು ಹೇಳಿಕೊಂಡಿದ್ದಾರೆ. ಏನೆಂದರೆ…. ಸರ್ ರೈತ ಯುವಕರಿಗೆ ಹೆಣ್ಣು ಕೊಡುವುದಿಲ್ಲ ತುಂಬಾ ಕಡಿಮೆ ಸರ್ ಎಂದು ತಮ್ಮ ಮನದಿಂಗಿತವನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಉತ್ತರಿಸಿದ ನವರಸ ನಾಯಕ “ಬೇಕಾಗಿಲ್ಲಾ ಉಗಿದು ಬಿಟ್ಟಾಕಿ!ಅಂತರ ಜಾತಿ ವಿವಾಹಕ್ಕೆ ಪರಿವರ್ತನೆಯಾಗಿ!ಜಾತಿಸುಟ್ಟು ಬೂದಿಮಾಡಿ!ಮನುಷ್ಯರೆಲ್ಲಾ ಒಂದೆ ಜಾತಿ ಎಂದು ಬಾಳಿ!ನಾನು ಒಕ್ಕಲಿಗನಾದರೂ 34ವರ್ಷದ ಹಿಂದೆಯೇ ಅಂತರಜಾತಿ ವಿವಾಹವಾದೆ..ಇಂದು ಬಹುತೇಕ ನನ್ನಬಂಧುಗಳು ನನ್ನ ಅನುಸರಿಸಿದರು!ನಾನೆ ಗೆದ್ದೆ!ನೀವು ಗೆಲ್ಲಿ!ನಿಜ ಜಾತ್ಯಾತೀತವಾಗಲಿ ನಮ್ಮದೇಶ!ಡೊಂಗಿಗಳ ದೂರನೂಕಿ ಬಾಳುವ!”, ಎಂದು ಹೇಳುವು ಮೂಲಕ ಯುವಕನಿಗೆ ಧೈರ್ಯ ತುಂಬಿದ್ದಾರೆ.
Comments