ಆಧುನಿಕ ನಗರವಾದ ಬಿಗ್ ಬಾಸ್ ಮನೆ

'ಬಿಗ್ ಬಾಸ್' ಮನೆಯಲ್ಲಿ ಈ ವಾರ ಆಧುನಿಕ ನಗರದ ಜೀವನ ಶೈಲಿಯನ್ನು ಪರಿಚಯಿಸುವ ಉದ್ದೇಶದಿಂದ, 'ಬಿಗ್ ಬಾಸ್ ನಗರ' ಲಕ್ಸುರಿ ಬಜೆಟ್ ಟಾಸ್ಕ್ ನೀಡಲಾಗಿದೆ. ಇದಕ್ಕಾಗಿ 10,000 ಲಕ್ಸುರಿ ಬಜೆಟ್ ಪಾಯಿಂಟ್ ಗಳನ್ನು ನಿಗದಿಪಡಿಸಲಾಗಿದ್ದು, ಕೊನೆಯಲ್ಲಿ ಸದಸ್ಯರ ಬಳಿ ಉಳಿಯುವ ಹಣವನ್ನು ಜೋಪಾನವಾಗಿಟ್ಟುಕೊಳ್ಳಲು ತಿಳಿಸಲಾಗಿದೆ.
ಜಯಶ್ರೀನಿವಾಸನ್, ಜಗನ್ ಟ್ಯಾಕ್ಸಿ ಡ್ರೈವರ್ ಗಳಾಗಿದ್ದು, ಚಂದ್ರು, ಸಮೀರಾಚಾರ್ಯ, ಕ್ಯಾಂಟೀನ್ ಮಾಲೀಕರಾಗಿದ್ದಾರೆ. ಆಶಿತಾ, ಕಾರ್ತಿಕ್, ನಿವೇದಿತಾ, ಶ್ರುತಿ, ಅನುಪಮಾ, ದಿವಾಕರ್, ಚಂದನ್ ನಾಗರಿಕರಾಗಿದ್ದಾರೆ. ರಿಯಾಜ್ ಹಾಗೂ ಕೃಷಿ ಅಧಿಕಾರಿಗಳಾಗಿದ್ದಾರೆ. ನಾಗರಿಕರಿಗೆ 2000 ರೂ. ನೀಡಲಾಗಿದೆ. ನಾಗರಿಕರು ಮತ್ತು ಕ್ಯಾಂಟೀನ್ ಮಾಲೀಕರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವಾಗ, ಟ್ಯಾಕ್ಸಿಯಲ್ಲಿ ಹೋಗಬೇಕಿದೆ. ತಮಗೆ ಬೇಕಾದ ತಿಂಡಿ, ಊಟಗಳನ್ನು ಕ್ಯಾಂಟೀನ್ ನಲ್ಲಿ ಹಣ ನೀಡಿ ಪಡೆದುಕೊಳ್ಳಬೇಕಿದೆ. ಮನೆಯ ಏರಿಯಾಗಳಿಗೆ ವಿವಿಧ ಹೆಸರಿಡಲಾಗಿದೆ.
Comments