ಬಿಗ್ ಬಾಸ್ -5 : ಕಾರ್ತಿಕ್ ಮನಗೆದ್ದ ನಿವೇದಿತಾ

'ಬಿಗ್ ಬಾಸ್' ಮನೆಯ ಮಹಿಳಾ ಸದಸ್ಯರಾದ ಕೃಷಿ, ಆಶಿತಾ, ಅನುಪಮಾ, ಶ್ರುತಿ, ನಿವೇದಿತಾ ಅವರಿಗೆ ವಿಶೇಷ ಚಟುವಟಿಕೆ ನೀಡಲಾಗಿತ್ತು. ಅದರಂತೆ, ಕಾರ್ತಿಕ್ ಮನಗೆಲ್ಲಲು ಮಹಿಳಾ ಸದಸ್ಯರು ಪ್ರಯತ್ನಿಸಬೇಕಿತ್ತು. ಹಾಡು, ನೃತ್ಯ, ಉಡುಗೆ, ಬುದ್ಧಿವಂತಿಕೆ ಬಳಸಿಕೊಂಡು ಕಾರ್ತಿಕ್ ಅವರ ಮನಗೆಲ್ಲಲು ತಿಳಿಸಲಾಗಿದ್ದು, ಈ ನಿಟ್ಟಿನಲ್ಲಿ ಮಹಿಳಾ ಸದಸ್ಯರು ಪ್ರಯತ್ನ ನಡೆಸಿದ್ದರು.
ಕಾರ್ತಿಕ್ ಅವರ ಮನ ಗೆಲ್ಲುವಲ್ಲಿ, ಶ್ರುತಿ, ಅನುಪಮಾ, ಕೃಷಿ, ಆಶಿತಾ ಅವರನ್ನು ಹಿಂದಿಕ್ಕಿ ನಿವೇದಿತಾ ವಿಜೇತರಾಗಿದ್ದಾರೆ. ತಮ್ಮ ಮನ ಗೆದ್ದಿದ್ದು ಯಾರು ಎಂಬುದನ್ನು ಕಾರ್ತಿಕ್ ತಿಳಿಸಿದ್ದಾರೆ. ನಿವೇದಿತಾ ಅವರಿಗೆ ಕ್ಯಾಪ್ಟನ್ ಕಾರ್ತಿಕ್ ಜೊತೆಗೆ ವಿಶೇಷ ಔತಣ ನೀಡಲಾಗಿದೆ. ಈ ವೇಳೆ ನಿವೇದಿತಾ ಅವರಿಗೆ ಕಾರ್ತಿಕ್ ಒಂದಿಷ್ಟು ಸಲಹೆ ನೀಡಿದ್ದಾರೆ. ಕಾರ್ತಿಕ್ ಅವರ ತಾಯಿಯ ಆಡಿಯೋ ಸಂಭಾಷಣೆ ಕೇಳಿಸಲಾಗಿದ್ದು, ಕ್ಯಾಪ್ಟನ್ ಆಗಿದ್ದು ಸಂತೋಷವಾಗಿದೆ. ಮನೆಯ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಬರದಂತೆ ನೋಡಿಕೊಳ್ಳಬೇಕು. ಎಲ್ಲರ ವಿಶ್ವಾಸವನ್ನು ಗಳಿಸಬೇಕು. ಅವರಿಗೆ ಇಷ್ಟವಾದ ಊಟ, ತಿಂಡಿ ವ್ಯವಸ್ಥೆ ಮಾಡಿಕೊಡುವಂತೆ ಕಾರ್ತಿಕ್ ತಾಯಿ ಸಲಹೆ ನೀಡಿದ್ದಾರೆ. ತಾಯಿ ಧ್ವನಿಯನ್ನು ಕೇಳಿಸಿಕೊಂಡ ಕಾರ್ತಿಕ್ ಧನ್ಯವಾದ ಹೇಳಿದ್ದಾರೆ. ಇನ್ನು ಮನೆಯ ಸದಸ್ಯರಿಗೆ ವಿಶೇಷ ಚಟುವಟಿಕೆಯನ್ನು ನೀಡಲಾಗಿದ್ದು, 2 ತಂಡಗಳನ್ನಾಗಿ ಮಾಡಲಾಗಿದೆ. ಬಲೂನ್ ರಕ್ಷಿಸಿಕೊಳ್ಳುವ ಈ ಚಟುವಟಿಕೆಯಲ್ಲಿ ಸದಸ್ಯರ ನಡುವೆ ಭಾರೀ ಮಾತಿನ ಚಕಮಕಿ ನಡೆದಿದೆ.
Comments