ಪದ್ಮಾವತಿ ಸಿನಿಮಾದ ಬಗ್ಗೆ ಶಿವರಾಜ್ ಕುಮಾರ್ ನೀಡಿದ ಹೇಳಿಕೆ ಏನು?

'ಕಲಾವಿದರನ್ನ ಟಾರ್ಗೆಟ್ ಮಾಡಬಾರದು. ದೀಪಿಕಾ ಅಭಿನಯ ಅದ್ಭುತ ಅನಿಸುತ್ತೆ, ಸಂಜಯ್ ಲೀಲಾ ಬನ್ಸಾಲಿ ಒಳ್ಳೆ ಸಿನಿಮಾ ಮಾಡಿರುತ್ತಾರೆ ಅನ್ನೋ ನಂಬಿಕೆ ಇದೆ, ರಿಲೀಸ್ ಗೂ ಮೊದಲು ಚಿತ್ರದ ಬಗ್ಗೆ ನಿರ್ಧಾರ ಮಾಡೋದು ಸರಿಯಲ್ಲ. ಈ ರೀತಿ ಮಾಡೋದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಂತಾಗುತ್ತೆ' ಎಂದು ಶಿವರಾಜ್ ಕುಮಾರ್ ತಮ್ಮ ಅಭಿಪ್ರಾಯವನ್ನ ತಿಳಿಸಿದ್ರು.
ಸದ್ಯ ಈ ಹೇಳಿಕೆ ಫೇಸ್ ಬುಕ್ ನಲ್ಲಿ ತೀರ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಅನೇಕ ರಜಪೂತರು ಶಿವರಾಜ್ ಕುಮಾರ್ ಹೇಳಿಕೆ ಹಾಗೂ ಅವರ ಅಭಿನಯದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದರಿಂದ ಕೋಪಗೊಂಡಿರುವ ಶಿವಣ್ಣನ ಅಭಿಮಾನಿಗಳು ನಾವು 'ಪದ್ಮಾವತಿ' ಸಿನಿಮಾಗೆ ಬೆಂಬಲಿಸುತ್ತೇವೆ ಏನು ಬೇಕಿದ್ದರೂ ಮಾಡಿಕೊಳ್ಳಿ ಎಂದು ಕಾಮೆಂಟ್ ಹಾಕಿದ್ದಾರೆ.
Comments