ಬಿಗ್ ಬಾಸ್ ಮನೆಯಲ್ಲಿ ಕಾರ್ತಿಕ್ ಮನಗೆಲ್ಲಲು ಮಹಿಳಾ ಸದಸ್ಯರ ಕಸರತ್ತು

ಮನೆಯ ಮಹಿಳಾ ಸದಸ್ಯರಾದ ಕೃಷಿ, ಆಶಿತಾ, ಅನುಪಮಾ, ಶ್ರುತಿ, ನಿವೇದಿತಾ ಅವರಿಗೆ 'ಬಿಗ್ ಬಾಸ್' ವಿಶೇಷ ಚಟುವಟಿಕೆಯೊಂದನ್ನು ನೀಡಿದ್ದಾರೆ. ಅದರಂತೆ, ಕಾರ್ತಿಕ್ ಮನಗೆಲ್ಲಲು ಪ್ರಯತ್ನಿಸಬೇಕಿದೆ. ಹಾಡು, ನೃತ್ಯ, ಉಡುಗೆ, ಬುದ್ಧಿವಂತಿಕೆ ಬಳಸಿಕೊಂಡು ಕಾರ್ತಿಕ್ ಅವರ ಮನಗೆಲ್ಲಲು ತಿಳಿಸಲಾಗಿದ್ದು, ಮಹಿಳಾ ಸದಸ್ಯರು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ.
'ಬಿಗ್ ಬಾಸ್' ಮನೆಯಲ್ಲಿ ಈ ವಾರ ಕಾರ್ತಿಕ್ ಜಯರಾಂ(ಜೆ.ಕೆ.) ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಕ್ಯಾಪ್ಟನ್ ಆಯ್ಕೆಗಾಗಿ ನೀಡಲಾಗಿದ್ದ ಚಟುವಟಿಕೆಯಲ್ಲಿ ಕಾರ್ತಿಕ್ ಮತ್ತು ಜಯಶ್ರಿನಿವಾಸನ್ ಅವರು 2 ಸಲ ಸಮನಾಗಿ ಬ್ಯಾಡ್ಜ್ ಗಳನ್ನು ಪಡೆದ ಕಾರಣ ಮನೆಯ ಸದಸ್ಯರೆಲ್ಲಾ ಸೇರಿ ಕ್ಯಾಪ್ಟನ್ ಆಯ್ಕೆ ಮಾಡಿದ್ದಾರೆ. ಈ ವಾರ ಮನೆಯಲ್ಲಿ ಉಳಿಸಿಕೊಳ್ಳುವ ಇಬ್ಬರು ಸದಸ್ಯರನ್ನು ತಿಳಿಸುವಂತೆ ನಾಮಿನೇಷನ್ ಪ್ರಕ್ರಿಯೆಯಲ್ಲಿ 'ಬಿಗ್ ಬಾಸ್' ಸೂಚಿಸಿದ್ದಾರೆ. ಸದಸ್ಯರ ಆಯ್ಕೆಯನುಸಾರ ಈ ವಾರ ರಿಯಾಜ್, ಚಂದ್ರು, ಸಮೀರಾಚಾರ್ಯ, ಜಯಶ್ರೀನಿವಾಸನ್, ಕೃಷಿ ನಾಮಿನೇಟ್ ಆಗಿದ್ದು, ಕ್ಯಾಪ್ಟನ್ ಕಾರ್ತಿಕ್, ದಿವಾಕರ್ ಅವರನ್ನು ನೇರ ನಾಮಿನೇಟ್ ಮಾಡಿದ್ದಾರೆ. ವೀಕ್ಷಕರ(ಜನರ) ವೋಟ್ ಕುರಿತಾಗಿ ಮಾತನಾಡಿದ್ದ ದಿವಾಕರ್ ಅವರಿಗೆ ನಾಮಿನೇಟ್ ಮಾಡಿದ್ದು ಏಕೆ ಎಂಬುದನ್ನು ನಂತರದಲ್ಲಿ ತಿಳಿ ಹೇಳಿದ್ದಾರೆ.
Comments