ಪವರ್ ಸ್ಟಾರ್ ಗೆ ಈ ಬಿರುದು ಕೊಟ್ಟಿದ್ದು ಯಾರು?
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂದು ಅಭಿಮಾನಿಗಳು ಕೂಗುತ್ತಿದ್ದರೆ, ವೇದಿಕೆ ಏರಿದ ಶಿವಣ್ಣ 'ನೀವಿವತ್ತು ಪವರ್ ಸ್ಟಾರ್ ಎಂದು ಕೂಗುತ್ತಿದ್ದೀರಲ್ಲ. ಆ ಪವರ್ ಸ್ಟಾರ್ ಗೆ ಪವರ್ ಕೊಟ್ಟಿದ್ದೇ ಈ ಟವರ್' ಎಂದು ಸಿನಿಮೀಯ ಶೈಲಿಯಲ್ಲಿ ಡೈಲಾಗ್ ಹೊಡೆದರು ಶಿವಣ್ಣ.
ಪುನೀತ್ ರಾಜ್ ಕುಮಾರ್ ಎಂದರೆ ಪವರ್ ಸ್ಟಾರ್ ಎಂಬ ಹೆಸರು ಹಿಂದೆಯೇ ಬರುತ್ತದೆ. ಹಾಗಿದ್ದರೆ ಪವರ್ ಸ್ಟಾರ್ ಗೆ ಈ ಬಿರುದು ಕೊಟ್ಟಿದ್ದು ಯಾರು? ಪುನೀತ್ ಸಹೋದರ ಶಿವರಾಜ್ ಕುಮಾರ್ ಇದನ್ನು ಬಹಿರಂಗಪಡಿಸಿದ್ದಾರೆ. ಅಂಜನಿ ಪುತ್ರ ಅಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಶಿವಣ್ಣ ಈ ವಿಷಯ ಬಹಿರಂಗಪಡಿಸಿದ್ದಾರೆ. ಚಿಕ್ಕಂದಿನಿಂದಲೇ ಪುನೀತ್ ತುಂಬಾ ಆಕ್ಟಿವ್. ಅವನ ಬೆಳವಣಿಗೆ ನೋಡಿ ಪವರ್ ಸ್ಟಾರ್ ಎಂದು ಕೊಟ್ಟರೆ ಚೆನ್ನಾಗಿರುತ್ತದೆ ಎಂದು ನಾನೇ ಸೂಚಿಸಿದೆ ಎಂದು ಶಿವಣ್ಣ ಹೇಳಿಕೊಂಡಿದ್ದಾರೆ.
Comments