ಬಿಗ್ ಬಾಸ್ : ಅನುಪಮಾ ತಾಯಿ ಮತ್ತು ಕೀರ್ತಿ ನಡುವೆ ಮಾತಿನ ಚಕಮಕಿ

ಅನುಪಮಾ ಅವರ ತಾಯಿ ಮತ್ತು ಕೀರ್ತಿ ಅವರ ನಡುವೆ ವೇದಿಕೆಯಲ್ಲೇ ಮಾತಿಗೆ ಮಾತು ಬೆಳೆದಿದ್ದು, ಮಧ್ಯಪ್ರವೇಶಿಸಿದ ಸುದೀಪ್, ಇದು ಜಗಳದ ವೇದಿಕೆಯಲ್ಲ, 'ಬಿಗ್ ಬಾಸ್' ವೇದಿಕೆ. ಇಲ್ಲಿ ಜಗಳಕ್ಕೆ ಅವಕಾಶವಿಲ್ಲ ಎಂದಿದ್ದಾರೆ. ಸದಸ್ಯರ ಕುರಿತಾಗಿ ಅವರ ಕುಟುಂಬದವರ ಎದುರು ಅಭಿಪ್ರಾಯ ವ್ಯಕ್ತಪಡಿಸಿದ ಕೀರ್ತಿ, ಮನೆಯಲ್ಲಿ ಸದಸ್ಯರು ದಿನದ 24 ಗಂಟೆಯೂ ಜೊತೆಗಿರುತ್ತಾರೆ. ನಮಗೆ ತೋರಿಸುವುದು ಕೇವಲ 1.30 ಗಂಟೆ ಮಾತ್ರ. ಜಗನ್ ಮತ್ತು ಆಶಿತಾ ಅವರ ಕುರಿತಾಗಿ ಟ್ರೋಲ್ ಆಗ್ತಿದೆ ಎಂದಿದ್ದಾರೆ.
ಅಲ್ಲಿ ಬುದ್ದಿ ಹೇಳದ ನೀವು ಫೇಸ್ ಬುಕ್ ನಲ್ಲಿ ಏನೇನೋ ಹೇಳಿದ್ದೀರಿ. ಎಲ್ಲರನ್ನೂ ಹೊಗಳಿದ್ದ ನೀವು ನಾಲ್ವರ ಹೆಸರನ್ನು ಹೇಳಲಿಲ್ಲ ಎಂದು ಆಕ್ಷೇಪಿಸಿದ್ದಾರೆ. ಫೇಸ್ ಬುಕ್ ನಲ್ಲಿ ನಾನು ನನ್ನ ಅಭಿಪ್ರಾಯ ಹಂಚಿಕೊಂಡಿದ್ದೇನೆ ಎಂದು ಕೀರ್ತಿ ಹೇಳಿದ್ದಾರೆ. ಆಗ ಮಧ್ಯ ಪ್ರವೇಶಿಸಿದ ಸುದೀಪ್, ಇದು ಜಗಳದ ವೇದಿಕೆಯಲ್ಲ. ಎಲ್ಲರಿಗೂ ಮಾತನಾಡಲು ಅನಿಸಿಕೆ ಹೇಳಿಕೊಳ್ಳಲು ಅವಕಾಶವಿದೆ, ವಾದ ಮಾಡಲು ಅಲ್ಲ. ಯಾರನ್ನೂ ಅಪಮಾನ ಮಾಡಲು ಇಲ್ಲಿಗೆ ಕರೆದಿಲ್ಲ. ಗೌರವ ಪೂರ್ವಕವಾಗಿ ಮಾತನಾಡಿ ಎಂದು ಹೇಳಿದ್ದಾರೆ. ಸದಸ್ಯರ ಕುಟುಂಬದವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಮನೆಯಲ್ಲಿ ಇದ್ದಂತೆಯೇ ಅವರು ಮನೆಯೊಳಗೂ ಇದ್ದಾರೆ ಎಂದು ಹೇಳಿದ್ದಾರೆ. ಇದೇ ರೀತಿ ಅನುಪಮಾ ಅವರ ಬಗ್ಗೆ ಅಭಿಪ್ರಾಯ ತಿಳಿಸುತ್ತಾ, ಅವರು ಇತಿಹಾಸವನ್ನು ಜಾಸ್ತಿ ಕೆದಕುತ್ತಿದ್ದಾರೆ ಎಂದಿದ್ದಾರೆ. ಅವರು ಇತಿಹಾಸ ಕೆದಕದೆ ಇದ್ದಿದ್ದರೆ ನಿಮಗೆ ಖುಷಿಯಾಗುತಿತ್ತೇನೋ? ಅವರು ತಪ್ಪನ್ನು ತಿದ್ದಿಕೊಂಡು ಆಟವಾಡ್ತಿದ್ದಾರೆ ಎಂದು ಹೇಳುತ್ತಿದ್ದಂತೆ, ಅನುಪಮಾ ಅವರ ತಾಯಿ ಆಕ್ಷೇಪಿಸುತ್ತಾ, ಕೀರ್ತಿಯೊಂದಿಗೆ ಮಾತಿಗೆ ಮಾತು ಬೆಳೆಸಿದ್ದಾರೆ.
Comments