ಕುರುಕ್ಷೇತ್ರದಲ್ಲಿ ದರ್ಶನ್ ಗೆ ಜೋಡಿಯಾಗಿ ಯಾರು ನಟಿಸುತ್ತಾರೆ..!!

ಕನ್ನಡದಲ್ಲಿ ಮುನಿರತ್ನ ನಿರ್ಮಾಣದ ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕುರುಕ್ಷೇತ್ರದ ದೀರ್ಘಾವಧಿಯ ಶೂಟಿಂಗ್ ಗೆ ನಿನ್ನೆ ಚಾಲನೆ ಸಿಕ್ಕಿದೆ. ಡಿಸೆಂಬರ್ 20ರ ಹೊತ್ತಿಗೆ ಶೂಟಿಂಗ್ ಪೂರ್ತಿ ಮುಗಿಸುವ ಭರವಸೆಯಲ್ಲಿ ಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರು ಇದ್ದಾರೆ.
ಇದುವರೆಗೆ ದರ್ಶನ್ ಗೆ ಜೋಡಿಯಾಗಿ ಯಾರು ನಟಿಸುತ್ತಾರೆ ಎಂಬ ಕುತೂಹಲವಿತ್ತು. ಕೆಲವು ನಟಿಯರ ಹೆಸರು ಈ ಹಿಂದೆ ಕೇಳಿಬರುತ್ತಿತ್ತು. ಅದೀಗ ಕನ್ನಡದ ನಟಿ ಮೇಘನಾ ರಾಜ್ ಪಾಲಾಗಿದೆ. ಬಹಳ ಚರ್ಚೆ, ಮಾತುಕತೆಯ ನಂತರ ಮೇಘನಾ ರಾಜ್ ಅವರನ್ನು ಆ ಪಾತ್ರಕ್ಕೆ ಆಯ್ಕೆ ಮಾಡಲಾಯಿತಂತೆ. ಭಾನುಮತಿ ಪಾತ್ರವನ್ನು ಕನ್ನಡದ ನಟಿಯೇ ಅಭಿನಯಿಸಬೇಕೆಂದು ನಿರ್ದೇಶಕ ನಾಗಣ್ಣ ಮತ್ತು ನಿರ್ಮಾಪಕ ಮುನಿರತ್ನ ಬಯಸಿದ್ದರಂತೆ.
ಹೀಗಾಗಿ ಅಂತಿಮವಾಗಿ ಮೇಘನಾ ರಾಜ್ ರನ್ನು ಆಯ್ಕೆ ಮಾಡಿಕೊಂಡರು. ಇದಕ್ಕಾಗಿ ದುರ್ಯೋಧನ ಮತ್ತು ಭಾನುಮತಿ ನಡುವಿನ ದೃಶ್ಯದ ಚಿತ್ರೀಕರಣವನ್ನು ಕೊನೆಗೆ ಉಳಿಸಿಕೊಂಡಿದ್ದರು. ಮೇಘನಾ ಈಗಾಗಲೇ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.ಕನ್ನಡದಲ್ಲಿ ಬಹುತಾರಾಗಣ ಮತ್ತು ದೊಡ್ಡ ಬಜೆಟ್ ನೊಂದಿಗೆ ತಯಾರಾಗುತ್ತಿರುವ ಕುರುಕ್ಷೇತ್ರ ಚಿತ್ರಕ್ಕೆ ವಿ.ಹರಿಕೃಷ್ಣ ಅವರ ಸಂಗೀತವಿದೆ. ಹಿರಿಯ ನಟರಾದ ಅಂಬರೀಷ್, ಅರ್ಜುನ್ ಸರ್ಜಾ, ಭಾರತಿ ವಿಷ್ಣುವರ್ಧನ್, ರವಿ ಶಂಕರ್, ಶ್ರೀನಾಥ್, ಸಾಯಿಕುಮಾರ್ ಸೇರಿದಂತೆ ನಟ ನಟಿಯರಾದ ಸ್ನೇಹಾ, ನಿಖಿಲ್ ಕುಮಾರ್, ಹರಿಪ್ರಿಯಾ ಅಭಿನಯಿಸಿದ್ದಾರೆ.
Comments