'ಅಂಜನಿಪುತ್ರ ಟ್ರೇಲರ್' ಗೆ ಫಿದಾ ಆದ ಅಭಿಮಾನಿಗಳು
ಬೆಂಗಳೂರು: ಪಾರ್ವತಮ್ಮ ರಾಜ್ ಕುಮಾರ್ ಆಡಿಯೋ ಸಂಸ್ಥೆ (PRK) ಯಿಂದ ನಟ ಪುನೀತ್ ರಾಜ್ ಕುಮಾರ್ ಅವರು ತಮ್ಮ ಸಿನಿಮಾ 'ಅಂಜನಿಪುತ್ರ' ಹಾಡುಗಳನ್ನು ಹೊರ ತಂದಿದ್ದಾರೆ.
ಬೆಂಗಳೂರು: ಪಾರ್ವತಮ್ಮ ರಾಜ್ ಕುಮಾರ್ ಆಡಿಯೋ ಸಂಸ್ಥೆ (PRK) ಯಿಂದ ನಟ ಪುನೀತ್ ರಾಜ್ ಕುಮಾರ್ ಅವರು ತಮ್ಮ ಸಿನಿಮಾ 'ಅಂಜನಿಪುತ್ರ' ಹಾಡುಗಳನ್ನು ಹೊರ ತಂದಿದ್ದಾರೆ. ಸಂಸ್ಥೆಯ ಫಸ್ಟ್ ಆಲ್ಬಂ ಬಿಡುಗಡೆ ಮಾಡಿರುವ ಪುನೀತ್, ಈಗ ಹಲವಾರು ಅಭಿಮಾನಿಗಳು 'ಅಂಜನಿಪುತ್ರ' ಚಿತ್ರದ ಟ್ರೇಲರ್ ಹಾಗೂ ಹಾಡುಗಳನ್ನು ಮೆಚ್ಚಿಕೊಂಡಿದ್ದು. ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಚಿತ್ರ ಎಲ್ಲಡೆ ಕುತೂಹಲ ಮೂಡಿಸುತ್ತಿದೆ.
ಆ್ಯಕ್ಷನ್ ಪ್ರಿಯರಲ್ಲಿ ಚಿತ್ರದ ಟ್ರೇಲರ್ ಎಕ್ಸೈಟ್ ಮೂಡಿಸುತ್ತಿದೆ. ಅಂಜನಿಪುತ್ರ ಚಿತ್ರವನ್ನು ಹರ್ಷ ನಿರ್ದೇಶನ ಮಾಡುತ್ತಿದ್ದು, ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಈ ಸಿನಿಮಾದಲ್ಲಿ ಪುನೀತ್ ಗೆ ಜತೆಯಾಗಿ ರಷ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.
Comments