ಸಿಹಿ ಕಹಿ ಚಂದ್ರುನಿಂದ ನಿವೇದಿತಾ ಗೌಡಗೆ ಶಭಾಷ್ ಗಿರಿ

'ಬಿಗ್ ಬಾಸ್ ಮನೆಗೆ ಬಂದ ನಿರಂಜನ್ ಅವರಂತೂ ಸದಸ್ಯರಿಂದ ಹಾಡು, ಮಿಮಿಕ್ರಿ, ಡ್ಯಾನ್ಸ್ ಹೀಗೆ ಹಲವಾರು ಚಟುವಟಿಕೆ ಮಾಡಿಸಿದ್ದು, ಎಲ್ಲರೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ವಿವಿಧ ಬಹುಮಾನಗಳನ್ನು ನೀಡಿದ್ದು, ರಿಯಾಜ್, ಚಂದನ್, ನಿವೇದಿತಾ ಅವರು ಪಡೆದುಕೊಂಡಿದ್ದಾರೆ. ನಿವೇದಿತಾಗೆ ಹೆಚ್ಚಿನ ಬಹುಮಾನಗಳು ಬಂದಿವೆ. ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಶಿಕ್ಷಕ ನಿರಂಜನ್ ಪದಕಗಳನ್ನು ನೀಡಿದ್ದಾರೆ.
'ಬಿಗ್ ಬಾಸ್'ನಲ್ಲಿ ನಡೆದ ಲಕ್ಸುರಿ ಬಜೆಟ್ ಟಾಸ್ಕ್ 'ಬಿಗ್ ಬಾಸ್ ಬೋರ್ಡಿಂಗ್ ಸ್ಕೂಲ್' ಟಾಸ್ಕ್ ಮುಕ್ತಾಯವಾಗಿದೆ. ಶಾಲಾ ಮಕ್ಕಳಾಗಿದ್ದ ಬಗ್ಗೆ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಮನಸೆಳೆದಿದ್ದಾರೆ. ಅಲ್ಲದೇ ಶಾಲೆಯ ಅಭಿಪ್ರಾಯ ಹಂಚಿಕೊಂಡಿದ್ದು, ಚಿಕ್ಕ ವಯಸ್ಸಿನಲ್ಲಿ ಪೋಷಕರು ಶಾಲೆಗೆ ಕಳಿಸಿದ್ದನ್ನು ನೆನಪಿಸಿಕೊಂಡಿದ್ದಾರೆ. ಕಾರ್ತಿಕ್, ನಾವೆಲ್ಲಾ ಮಕ್ಕಳಾಗಿ ಶಾಲೆಗೆ ಬರುವ ವೇಳೆಗೆ ಅಡುಗೆ ಉಸ್ತುವಾರಿ ವಹಿಸಿಕೊಂಡಿದ್ದ ಚಂದ್ರು, ಆಶಿತಾ, ಅನುಪಮಾ, ಶ್ರುತಿ ಅವರು ಊಟ ಕೊಟ್ಟಿದ್ದಕ್ಕೆ ಧನ್ಯವಾದ ಹೇಳಿದ್ದಾರೆ. ಇನ್ನು ಈ ವಾರ ಉತ್ತಮ ಮತ್ತು ಕಳಪೆ ಪ್ರದರ್ಶನ ನೀಡಿದ ಸ್ಪರ್ಧಿಗಳನ್ನು ಕ್ಯಾಪ್ಟನ್ ನಿವೇದಿತಾ ಆಯ್ಕೆ ಮಾಡಿದ್ದಾರೆ. ಚಂದನ್ ಬೆಸ್ಟ್ ಪರ್ ಫಾರ್ಮ
Comments