ಮತ್ತೆ ಒಂದಾದ ಬಾಲಿವುಡ್ ಸಕ್ಸಸ್ ಜೋಡಿ..!!

ಬಾಲಿವುಡ್‌ನ ಸಕ್ಸಸ್ ಜೋಡಿಗಳಲ್ಲಿ ಶಾರುಖ್ ಹಾಗೂ ಜೂಹಿ ಕೂಡ ಒಂದು. 2001 ರಲ್ಲಿ ತೆರೆಕಂಡಿದ್ದ 'ಒನ್ 2 ಕಾ 4', ಪೆಹಲಿ (2005), ಭೂತ್‌ನಾಥ್ ( 2008 ) ಚಿತ್ರಗಳಲ್ಲಿ ಈ ಜೋಡಿ ಒಟ್ಟಾಗಿ ನಟಿಸಿತ್ತು. ಇದಾದ ಬಳಿಕ ಇವರಿಬ್ಬರು ತೆರೆ ಹಂಚಿಕೊಂಡಿರಲಿಲ್ಲ. ಇದೀಗ ಮತ್ತೊಮ್ಮೆ ಒಟ್ಟಾಗಿ ನಟಿಸಲು ಮುಂದಾಗಿದ್ದಾರೆ ಶಾರುಖ್ ಹಾಗೂ ಜೂಹಿ.
ಆನಂದ್ ಎಲ್ ರೈ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲಿ ಜೂಹಿ ವಿಶೇಷ ಪಾತ್ರವೊಂದನ್ನು ನಿರ್ವಹಿಸಲಿದ್ದಾರಂತೆ. ಈ ಚಿತ್ರದಲ್ಲಿ ನಟಿಸುವಂತೆ ನಟ ಶಾರುಖ್ ಅವರೇ ಆಹ್ವಾನ ನೀಡಿದ್ದಾರೆ ಎನ್ನುವ ವಿಚಾರವನ್ನು ಆಂಗ್ಲ ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ ಜೂಹಿ. ಈ ಚಿತ್ರದಲ್ಲಿ ಶಾರುಕ್ ನಾಯಕ ನಟನಾಗಿ ಆ್ಯಕ್ಟ್ ಮಾಡಲಿದ್ದಾರೆ.ಒಟ್ಟಿನಲ್ಲಿ 10 ವರ್ಷಗಳ ಬಳಿಕ ಈ ಜೋಡಿ ಮತ್ತೆ ಒಂದಾಗುತ್ತಿರುವುದು ಇವರ ಅಭಿಮಾನಿಗಳಲ್ಲಿ ಸಂತೋಷವನ್ನುಂಟು ಮಾಡಿದೆ.
Comments