ಪದ್ಮಾವತಿ ವಿವಾದಕ್ಕೆ ಬಿಗ್ ಟ್ವಿಸ್ಟ್



ಜೈಪುರದ ನಹರ್ಗಢ ಕೋಟೆಯ ಬಳಿ ವ್ಯಕ್ತಿಯೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪುತ್ಥಳಿಗಳನ್ನು ನಾವು ಸುಡುವುದಿಲ್ಲ, ಕೊಲ್ಲುತ್ತೇವೆ ಅಂತಾ ಮೃತದೇಹದ ಪಕ್ಕದಲ್ಲಿ ಬರೆಯಲಾಗಿದೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಯಾವ ಕಾರಣಕ್ಕೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅನ್ನೋದು ಕೂಡ ಬಹಿರಂಗವಾಗಿಲ್ಲ.
ಕಳೆದ ಕೆಲ ತಿಂಗಳುಗಳಿಂದ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಸಿನೆಮಾ ತೀವ್ರ ವಿವಾದಕ್ಕೆ ತುತ್ತಾಗಿದೆ. ಕರ್ಣಿ ಸೇನಾ ಸೇರಿದಂತೆ ವಿವಿಧ ರಾಜಪೂತ ಸಂಘಟನೆಗಳು ಚಿತ್ರವನ್ನು ನಿಷೇಧಿಸುವಂತೆ ಪಟ್ಟು ಹಿಡಿದಿವೆ. ಬನ್ಸಾಲಿ ಹಾಗೂ ದೀಪಿಕಾ ಪಡುಕೋಣೆಯ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಿವೆ.ಪದ್ಮಾವತಿ ವಿವಾದಕ್ಕೂ ಈ ಸಾವಿಗೂ ಏನಾದ್ರೂ ಸಂಬಂಧವಿದ್ಯಾ ಅನ್ನೋ ಅನುಮಾನ ಕೂಡ ಮೂಡಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸ್ತಿದ್ದಾರೆ.
Comments