ಸರಿಗಮಪ -14 , ರಾಜೇಶ್ ಕೃಷ್ಣನ್ ಬದಲಿಗೆ ಆ ಸ್ಥಾನಕ್ಕೆ ಬರುವವರು ಯಾರು?

ಜೀ ಕನ್ನಡ ವಾಹಿನಿಯಲ್ಲಿ 13 ಕಂತು ಮುಗಿಸಿರುವ 'ಸರಿಗಮಪ ಲಿಟಲ್ ಚಾಂಪ್ಸ್' ಕಾರ್ಯಕ್ರಮದಲ್ಲಿ ರಾಜೇಶ್ ಕೃಷ್ಣನ್ ತೀರ್ಪುಗಾರರಾಗಿದ್ದರು. ಮೊದಲಿಗೆ ರಾಜೇಶ್ ಕೃಷ್ಣನ್ ಬದಲಿಗೆ ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ ಬರುತ್ತಾರೆಂಬ ಸುದ್ದಿಗಳಿತ್ತು. ಆದರೆ ಅದೆಲ್ಲಾ ವದಂತಿಗಳಿಗೆ ತೆರೆ ಬಿದ್ದಿದ್ದು, ರಾಜೇಶ್ ಸ್ಥಾನಕ್ಕೆ ನಾದಬ್ರಹ್ಮ ಹಂಸಲೇಖಾ ತೀರ್ಪುಗಾರರಾಗುವುದು ಖಚಿತವಾಗಿದೆ.
ಹಂಸಲೇಖಾ ಇದಕ್ಕೂ ಮೊದಲು ಸರಿಗಮಪ ಕಾರ್ಯಕ್ರಮದ ತೀರ್ಪುಗಾರರಾಗಿ ಕೆಲಸ ಮಾಡಿದ್ದರು. ಅಷ್ಟೇ ಅಲ್ಲದೆ, ಪ್ರತೀ ಕಂತಿನ ಫೈನಲ್ ಎಪಿಸೋಡ್ ನಲ್ಲಿ ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಇನ್ನು ಮುಂದೆ ಪ್ರತೀ ಎಪಿಸೋಡ್ ನಲ್ಲೂ ಅವರೇ ಇರಲಿದ್ದಾರೆ. ರಾಜೇಶ್ ಕೃಷ್ಣನ್ ಈ ಕಂತಿನಲ್ಲಿ ಹೊರಗುಳಿದಿರುವುದು ಅವರ ಅಭಿಮಾನಿಗಳಿಗೆ ತೀವ್ರ ಬೇಸರ ಉಂಟು ಮಾಡಿದೆ. ಇವರ ಹೊರತಾಗಿ ವಿಜಯ್ ಪ್ರಕಾಶ್ ಮತ್ತು ಅರ್ಜುನ್ ಜನ್ಯಾ ತೀರ್ಪುಗಾರರಾಗಿ ಮುಂದುವರಿಯಲಿದ್ದು, ಅನುಶ್ರೀ ನಿರೂಪಣೆ ಮಾಡಲಿದ್ದಾರೆ.
Comments