ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಹುಭಾಷಾ ತಾರೆ ನಮಿತಾ
ದಕ್ಷಿಣ ಭಾರತದ ಗ್ಲಾಮರಸ್ ನಟಿ ನಮಿತಾ ತನ್ನ ದೀರ್ಘಕಾಲದ ಗೆಳೆಯ ವೀರೇಂದ್ರ ಚೌಧರಿ ಅವರನ್ನು ತಿರುಪತಿಯಲ್ಲಿ ವಿವಾಹವಾದರು. 'ನೀಲಕಂಠ', 'ಹೂ', 'ನಮಿತಾ ಐ ಲವ್ ಯು' ಸೇರಿದಂತೆ ಕನ್ನಡದ ಹಲವು ಚಿತ್ರಗಳಲ್ಲಿ ಮಿಂಚಿದ್ದ ನಟಿ ನಮಿತಾ ಇಂದು ಹಸೆಮಣೆ ಏರಿದರು.
ತಿರುಪತಿಯ ಫೂಟ್ಹಿಲ್ನಲ್ಲಿರುವ ಇಸ್ಕಾನ್ ದೇವಾಲಯದಲ್ಲಿ ವಿವಾಹ ಸಮಾರಂಭ ನೆರವೇರಿತು. 36 ವರ್ಷದ ನಮಿತಾ ಕಳೆದ ಕೆಲವು ಸಮಯದಿಂದ ವೀರೇಂದ್ರರನ್ನು ಪ್ರೀತಿಸುತ್ತಿದ್ದು, ಈ ತಿಂಗಳಾರಂಭದಲ್ಲಿ ವಿಡಿಯೋ ಸಂದೇಶದಲ್ಲಿ ಮದುವೆಯ ಸುಳಿವು ನೀಡಿದ್ದರು. ತಮಿಳು ರಿಯಾಲಿಟಿ ಶೋ ಬಿಗ್ಬಾಸ್ನಲ್ಲಿ ನಮಿತಾರ ಸ್ನೇಹಿತರಾಗಿದ್ದ ರೈಝಾ ವಿಲ್ಸನ್ ಈ ವಿಡಿಯೋವನ್ನು ಶೇರ್ ಮಾಡಿದ್ದರು.2002ರಲ್ಲಿ ತೆಲುಗಿನ 'ಸಂತಮ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ನಮಿತಾ, 2004ರಲ್ಲಿ ವಿಜಯಕಾಂತ್ ನಟನೆಯ 'ಏಂಗಲ್ ಅಣ್ಣಾ' ಚಿತ್ರದ ಮೂಲಕ ತಮಿಳು ಚಿತ್ರರಂಗ ಪ್ರವೇಶಿಸಿದ್ದರು.
Comments