ಬಿಗ್ ಬಾಸ್ ಮನೆಯ ಸದಸ್ಯರ ನಡುವೆ ಹೆಚ್ಚುತ್ತಿರುವ ಅಂತರ

'ಬಿಗ್ ಬಾಸ್' ಮನೆಯಲ್ಲಿ ಅನಿರೀಕ್ಷಿತ ಬೆಳವಣಿಗೆ ಕೂಡ ನಡೆದಿವೆ. ಅಣ್ಣ -ತಮ್ಮಂದಿರಂತೆ ಇದ್ದ ರಿಯಾಜ್ ಮತ್ತು ದಿವಾಕರ್ ನಡುವೆ ಜಗಳವಾಗಿದೆ. ಆಗಾಗ ಜಗಳವಾಡುತ್ತಿದ್ದ ಜಗನ್ -ಸಮೀರಾಚಾರ್ಯ ಅವರ ನಡುವಿನ ಬಾಂಧವ್ಯ ಹೆಚ್ಚಾಗಿದೆ.
ರಿಯಾಜ್ ಮತ್ತು ದಿವಾಕರ್ ಅವರ ನಡುವೆ ಮಾತಿಗೆ ಮಾತು ಬೆಳೆದಿದೆ. ನೀನು ಸಹಾಯ ಮಾಡಿದ್ದನ್ನು ನಾನೇ ಮಾಡಿದ್ದೆ ಎಂದು ಹೇಳಿಕೊಳ್ತಿಯಾ ಎಂದು ದಿವಾಕರ್ ಸಿಟ್ಟಿನಲ್ಲಿ ಮಾತನಾಡಿದ್ದು, ರಿಯಾಜ್ ಕೂಡ ಸಿಟ್ಟಾಗಿ ಇನ್ನುಮುಂದೆ ನನಗೆ ಮಾತನಾಡಿಸಬೇಡ ಎಂದಿದ್ದಾರೆ. ಇದೇ ವಿಚಾರವನ್ನು ಜಯಶ್ರೀನಿವಾಸನ್ ಹಾಗೂ ಶೀತಲ್ ಅವರ ಬಳಿ, ನಂತರದಲ್ಲಿ ಸಮೀರ್ ಬಳಿ ಚರ್ಚಿಸಿದ್ದಾರೆ. ಚಂದನ್, ನಿವೇದಿತಾ ಬಳಿ ಮಾತನಾಡುತ್ತಿದ್ದ ದಿವಾಕರ್, ಸಹಾಯ ಮಾಡಿದ್ದನ್ನೆಲ್ಲಾ ರಿಯಾಜ್ ಹೇಳಿಕೊಳ್ಳಬಾರದೆಂದು ತಿಳಿಸಿದ್ದಾರೆ. ಸದಸ್ಯರ ನಡುವೆ ಅಂತರ, ಬಾಂಧವ್ಯ ಹೆಚ್ಚಾಗತೊಡಗಿದೆ. ಶಾಲಿನಿ ಅವರು ಹೋದ ನಂತರ ಶೀತಲ್ ಶೆಟ್ಟಿ ದೈಹಿಕ ಶಿಕ್ಷಕರಾಗಿ ಕಾಣಿಸಿಕೊಂಡಿದ್ದಾರೆ.
Comments