ಬಿಗ್ ಬಾಸ್ ಮನೆಗೆ ಬಂದ ಶಾಲಿನಿ ಟೀಚರ್

ಹಿಂದಿನ ಸೀಸನ್ ನಲ್ಲಿ ಸ್ಪರ್ಧಿಯಾಗಿದ್ದ ಶಾಲಿನಿ ಅವರು ಶಿಕ್ಷಕಿಯಾಗಿ ಮನೆಯೊಳಗೆ ಪ್ರವೇಶಿಸಿದ್ದು, ಮಕ್ಕಳಾಗಿರುವ ಮನೆಯ ಸದಸ್ಯರಿಗೆ ವಿವಿಧ ಚಟುವಟಿಕೆಗಳನ್ನು ನೀಡಿದ್ದಾರೆ. ಶಾಲೆಯಲ್ಲಿ ಚಂದ್ರು, ಸಮೀರಾಚಾರ್ಯ, ದಿವಾಕರ್ ಮೊದಲಾದವರು ಹಾಡುವ ಮೂಲಕ ರಂಜಿಸಿದ್ದಾರೆ.
ಮಕ್ಕಳ ರೀತಿಯಲ್ಲಿ ಸದಸ್ಯರು ಪೇಯ್ಟಿಂಗ್ ಮಾಡಿದ್ದಲ್ಲದೇ, ತಮ್ಮ ಕಲ್ಪನೆಯಲ್ಲಿ ಸದಸ್ಯರೆಲ್ಲರ ವ್ಯಕ್ತಿತ್ವದ ಚಿತ್ರಣ ಕಟ್ಟಿಕೊಟ್ಟಿದ್ದಾರೆ. ಜಗನ್, ಚಂದ್ರು ತಲೆಯ ಮೇಲೆ ಬಣ್ಣ ಬಳಿದರೆ, ಚಂದನ್ -ಶ್ರುತಿ ಅವರಿಗೆ ಬೆಕ್ಕಿನ ರೀತಿ ಚಿತ್ರಿಸಿದ್ದಾರೆ. ಕಾರ್ತಿಕ್, ಅನುಪಮಾ ಅವರಿಗೆ ಹುಲಿಯ ಚಿತ್ರಣ ನೀಡಿದ್ದಾರೆ. ಚಂದನ್ ಮತ್ತು ಸಮೀರಾಚಾರ್ಯ ಅವರು ರಚಿಸಿದ್ದ ಚಿತ್ರಣಗಳು ಗಮನಸೆಳೆದಿವೆ ಎಂದು ಶಿಕ್ಷಕಿ ಶಾಲಿನಿ ತಿಳಿಸಿದ್ದು, ಸಮೀರಾಚಾರ್ಯರಿಗೆ ಬಹುಮಾನವಾಗಿ ಮೆಡಲ್ ಕೊಟ್ಟಿದ್ದಾರೆ. ಇನ್ನು ಮನೆಯ ಕ್ಯಾಪ್ಟನ್ ನಿವೇದಿತಾ ಅವರು ನಾನ್ ಸೆನ್ಸ್ ಎಂದಿದ್ದಾಗಿ ದಿವಾಕರ್ ಜೋರು ಮಾತಿನಲ್ಲಿ ಕೂಗಾಡಿದರೆ, ತಾವು ಹಾಗೆ ಹೇಳಿಲ್ಲವೆಂದು ನಿವೇದಿತಾ ಕಣ್ಣೀರಿಟ್ಟಿದ್ದಾರೆ. ರಿಯಾಜ್ ಎಷ್ಟೆಲ್ಲಾ ಸಮಾಧಾನಪಡಿಸಿದರೂ, ದಿವಾಕರ್ ಕೇಳುವ ಸ್ಥಿತಿಯಲ್ಲಿರಲಿಲ್ಲ. ನಿವೇದಿತಾ ಬಿಕ್ಕಿ ಬಿಕ್ಕಿ ಅತ್ತಿದ್ದು, ಅವರಿಗೆ ಶಾಲಿನಿ, ಕಾರ್ತಿಕ್ ಮೊದಲಾದವರು ಸಮಾಧಾನಪಡಿಸಿದ್ದಾರೆ.
Comments